ಕೇಂದ್ರ ಸಚಿವರ ವಿರುದ್ಧದ ಭ್ರಷ್ಟಾಚಾರ ದೂರುಗಳ ಬಗ್ಗೆ ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಣೆ

ಕೇಂದ್ರ ಸಚಿವರ ವಿರುದ್ಧ ಬಂದಿರುವ ಭ್ರಷ್ಟಾಚಾರ ಕುರಿತ ದೂರುಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ.
ಪ್ರಧಾನಿ ಕಚೇರಿ
ಪ್ರಧಾನಿ ಕಚೇರಿ
ನವದೆಹಲಿ: ಕೇಂದ್ರ ಸಚಿವರ ವಿರುದ್ಧ ಬಂದಿರುವ ಭ್ರಷ್ಟಾಚಾರ ಕುರಿತ ದೂರುಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಪ್ರಧಾನಿ ಕಚೇರಿ ನಿರಾಕರಿಸಿದೆ.
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಹರಿಭಾಯಿ ಚೌಧರಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಬೆನ್ನಲ್ಲೇ ಪ್ರಧಾನಿ ಕಚೇರಿ ಸಚಿವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ನೀಡಲು ನಿರಾಕರಿಸಿದೆ.
ಕೇಂದ್ರ ಸಚಿವರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಬಂದಿರುವ ಭ್ರಷ್ಟಾಚಾರ ದೂರುಗಳ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ್ದ ಆರ್ ಟಿಐಗೆ ಮಾಹಿತಿ ನೀಡಲು ನಿರಾಕರಿಸಿರುವ ಪ್ರಧಾನಿ ಕಚೇರಿ, ಮಾಹಿತಿ ನೀಡುವುದರಿಂದ ವ್ಯಕ್ತಿ ನಿಷ್ಠ ಮತ್ತು ತೊಡಕಿಗೆ ಕಾರಣವಾಗಬಹುದು ಎಂದು ಹೇಳಿದೆ.
ಸಚಿವರ ವಿರುದ್ಧ ಸ್ವೀಕರಿಸಿರುವ ಭ್ರಷ್ಟಾಚಾರದ ದೂರುಗಳಲ್ಲಿ ಸುಳ್ಳು ಮತ್ತು ಅನಾಮಧೇಯ ದೂರುಗಳನ್ನು ಒಳಗೊಂಡಿದ್ದು, ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಮತ್ತು ಪೂರಕ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆರ್ ಟಿಐ ಮಾಹಿತಿ ಕೋರಿದ್ದ ಅಧಿಕಾರಿ ಸಂಜೀವ್ ಚತುರ್ವೇದಿ ಅವರಿಗೆ ಉತ್ತರ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com