ಬಿಜೆಪಿಯ ನಿಜವಾದ ಮೂಲತತ್ವಗಳನ್ನು ಅಡ್ವಾಣಿ ಪೂರ್ಣವಾಗಿ ತಿಳಿಸಿದ್ದಾರೆ: ಪ್ರಧಾನಿ ಮೋದಿ

ಎಲ್ ಕೆ ಅಡ್ವಾಣಿ ಅವರು ಬಿಜೆಪಿಯ ನಿಜವಾದ ಮೂಲ ತತ್ವಗಳನ್ನು ಪರಿಪೂರ್ಣವಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ವಿರೋಧಿಗಳು ದೇಶ...
ಅಡ್ವಾಣಿ - ನರೇಂದ್ರ ಮೋದಿ
ಅಡ್ವಾಣಿ - ನರೇಂದ್ರ ಮೋದಿ
Updated on: 
ನವದೆಹಲಿ: ಎಲ್ ಕೆ ಅಡ್ವಾಣಿ ಅವರು ಬಿಜೆಪಿಯ ನಿಜವಾದ ಮೂಲ ತತ್ವಗಳನ್ನು ಪರಿಪೂರ್ಣವಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ವಿರೋಧಿಗಳು ದೇಶ ವಿರೋಧಿಗಳಲ್ಲ ಮತ್ತು ಶತ್ರುಗಳೂ ಅಲ್ಲ ಎಂದ ತಮ್ಮ ಪಕ್ಷದ ಹಿರಿಯ ನಾಯಕನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ನಿಜವಾದ ಮೂಲತತ್ವವನ್ನು ಅಡ್ವಾಣಿ ಜೀ ಅವರು ಪರಿಪೂರ್ಣವಾಗಿ ತಿಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ರಾಷ್ಟ್ರ ಮೊದಲು, ಪಕ್ಷ ನಂತರ ಹಾಗೂ ಸ್ವಾರ್ಥ ತದನಂತರ ಎಂಬ ಮಂತ್ರವೂ ಉತ್ತಮ ಮಾರ್ಗದರ್ಶನವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನಾನು ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಹೆಮ್ಮೆಪಡುತ್ತೇನೆ. ಹಾಗೆಯೇ ಅಡ್ವಾಣಿಯಂತಹ ಶ್ರೇಷ್ಠ ನಾಯಕರು ಬಿಜೆಪಿಯನ್ನು ಬಲಿಷ್ಠಗೊಳಿಸಿರುವ ಬಗ್ಗೆ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಅಡ್ವಾಣಿ ಅವರನ್ನು ಶ್ಲಾಘಿಸಿದ್ದಾರೆ.
ಏಪ್ರಿಲ್ 6ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದಲ್ಲಿ ಬಿಜೆಪಿಯ ನಿಲುವುಗಳ ಬಗ್ಗೆ ತಮ್ಮ ಬ್ಲಾಗ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದ ಅಡ್ವಾಣಿ ಅವರು, ವೈವಿಧ್ಯತೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸುವುದು ಭಾರತೀಯ ಪ್ರಜಾಪ್ರಭುತ್ವದ ಸಾರ, ಬಿಜೆಪಿ ಸ್ಥಾಪನೆಯಾದ ದಿನದಿಂದಲೂ, ತನ್ನ ರಾಜಕೀಯ ವಿರೋಧಿಗಳನ್ನು ಶತ್ರುಗಳೆಂದು ಭಾವಿಸಿಲ್ಲ, ಬದಲಾಗಿ ಎದುರಾಳಿಗಳೆಂದಷ್ಟೇ ಪರಿಗಣಿಸಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com