ವಿವಿಐಪಿ ಚಾಪರ್ ಪ್ರಕರಣ:'ಎಪಿ' ಎಂದರೆ ಅಹಮದ್ ಪಟೇಲ್, ಇಡಿ ಚಾರ್ಜ್ ಶೀಟ್ ನಲ್ಲಿ ರಹಸ್ಯ ಬಯಲು!

ಅಗಸ್ಟಾ ವೆಸ್ಟ್ ಲ್ಯಾಂಡ್, ವಿವಿಐಪಿ ಚಾಪರ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಡೈರಿಯಲ್ಲಿ ಬರೆದುಕೊಂಡಿದ್ದ "ಎಪಿ" ಎಂದರೆ ಅಹಮದ್ ಪಟೇಲ್ ಎಂದು ಗುರುತಿಸಿದ್ದಾಗಿ ತಿಳಿದುಬಂದಿದೆ.
ಕ್ರಿಶ್ಚಿಯನ್ ಮೈಕೆಲ್
ಕ್ರಿಶ್ಚಿಯನ್ ಮೈಕೆಲ್
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್, ವಿವಿಐಪಿ ಚಾಪರ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಡೈರಿಯಲ್ಲಿ ಬರೆದುಕೊಂಡಿದ್ದ "ಎಪಿ" ಎಂದರೆ ಅಹಮದ್ ಪಟೇಲ್ ಎಂದು ಗುರುತಿಸಿದ್ದಾಗಿ ತಿಳಿದುಬಂದಿದೆ. ಗುರುವಾರ ಜಾರಿ ನಿರ್ದೇಶನಾಲಯ ಸಿಬಿಐಅ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ನಲ್ಲಿ ಈ ಕುರಿತು ರಹಸ್ಯ ಬಹಿರಂಗವಾಗಿದೆ.
ಈ ಒಪ್ಪಂದ ಜಾರಿ ಮಾಡುವ ವೇಳೆ ರಕ್ಷಣಾ ಅಧಿಕಾರಿಗಳು, ಮಧ್ಯವರ್ತಿಗಳು, ಆಡಳಿತಾಧಿಕಾರಿಗಳು, ಆಡಳಿತ ಪಕ್ಷದ ಪ್ರಮುಖ ನೇತಾರರಿಗೆ ಕಿಕ್ ಬ್ಯಾಕ್ ನ ಪಾಲನ್ನು ನೀಡಲಾಗಿತ್ತು ಎಂದು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವಿವರಿಸಿದೆ.
ಮೈಕೆಲ್ ವಿಚಾರಣೆ ವೇಳೆ "ಎಪಿ" ಹಾಗೂ ಎಫ್‌ಎಎಂ ಎಂಬ ಕೋಡ್ ಗಳ ವಿವರ ನೀಡಿದ್ದು ಎಪಿ ಎಂದರೆ ಅಹಮದ್ ಪಟೇಲ್  ಹಾಗೂ ಎಫ್‌ಎಎಂ ಎಂದರೆ ಅವರ ಕುಟುಂಬ ಎಂದು ವಿವರಿಸಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಹೇಳಿದೆ.
ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಕೆಲ ಕಾಂಗ್ರೆಸ್ ಪ್ರಭಾವಿ ನಾಯಕರ ಒತ್ತಡವಿತ್ತು ಎನ್ನುವುದನ್ನು ಸಹ ಮೈಕಲ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಎಫ್‌ಎಎಂ  ಎಂದರೆ ಕುಟುಂಬ - ಕಾಂಗ್ರೆಸ್, ಗಾಂಧಿ ಕುಟುಂಬ ಎಂದು ಆತ ವಿವರಿಸಿದ್ದಾನೆ. ಒಟ್ಟು  3 ಕೋಟಿ ಯುರೋಗಳ ಲಂಚ ಲಂಚದ ಹಣ ಪಾವತಿಸಿರುವ ವಿವರಗಳನ್ನು ಡೈಲ್ರಿಯಲ್ಲಿ ಬರೆಯಲಾಗಿದೆ ಎಂದಿ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.
ಇಡಿ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 52  ಮುಖ್ಯ ಪುಟಗಳನ್ನೂ ಸೇರಿ 3,000-ಪುಟಗಳಿರುವ ಪೂರಕ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದು ಇದರಲ್ಲಿ ಮೈಕಲ್ ಹಾಗೂ ಅವನ ಸ್ನೇಹಿತ ಡೇವಿಡ್ ಸೈಮ್ಸ್ ಹೆಸರನ್ನು ಸಹ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com