ವಿಡಿಯೋ: ಪರೀಕ್ಷೆಗೆ ತಡವಾಯ್ತು ಅಂತ ಕುದುರೆ ಏರಿ ಬಂದ ವಿದ್ಯಾರ್ಥಿನಿ, ಇದಕ್ಕೆ ಆನಂದ್ ಮಹಿಂದ್ರಾ ಹೇಳಿದ್ದೇನು?

ಹತ್ತನೇ ತರಗತಿ ಪರೀಕ್ಷೆಗೆ ತಡವಾಯಿತು ಅಂತ ವಿದ್ಯಾರ್ಥಿನಿಯೊಬ್ಬಳು ಕುದುರೆ ಏರಿ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತ್ರಿಶೂರ್: ಹತ್ತನೇ ತರಗತಿ ಪರೀಕ್ಷೆಗೆ ತಡವಾಯಿತು ಅಂತ ವಿದ್ಯಾರ್ಥಿನಿಯೊಬ್ಬಳು ಕುದುರೆ ಏರಿ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ತ್ರಿಶೂರ್ ನಲ್ಲಿ ವಿದ್ಯಾರ್ಥಿನಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಈ ವಿಡಿಯೋವನ್ನು ಮಹೀಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತ್ರಿಶೂರ್ ನಲ್ಲಿರುವ ಆಕೆಯ ಪರಿಚಿತರು ಇದ್ದರೆ ನನಗೆ ತಿಳಿಸಿ. ಈ ಬಾಲಕಿ ಹಾಗೂ ಕುದುರೆ ಫೋಟೋವನ್ನು ನಾನು ಕ್ಲಿಕ್ಕಿಸಬೇಕು. ಆ ಫೋಟೋವನ್ನು ನನ್ನ ಮೊಬೈಲ್ ನ ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳುತ್ತೇನೆ. ಆಕೆಯೇ ನನ್ನ ಪಾಲಿನ ಹೀರೋ ಎಂದು ಮೆಚ್ಚುಗೆ ಸಾಲನ್ನು ಬರೆದುಕೊಂಡಿದ್ದಾರೆ.
ಮಹಿಳೆಯ ಶಿಕ್ಷಣ ಮತ್ತೊಂದು ಹಂತವನ್ನು ತಲುಪಿದೆ. ನಿಜಕ್ಕೂ ಶ್ಲಾಘನೀಯ, ಇನ್ ಕ್ರೆಡಿಬಲ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಇನ್ನು ವಿದ್ಯಾರ್ಥಿನಿಯ ವಿಡಿಯೋವನ್ನು ಮನೋಜ್ ಕುಮಾರ್ ಎಂಬುವರು ಶೇರ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com