ಮೋದಿ ಜೀವನ ಚರಿತ್ರೆ
ದೇಶ
ಸೆನ್ಸಾರ್ ಬೋರ್ಡ್ ಪ್ರಮಾಣಪತ್ರ ನೀಡುವವರೆಗೆ 'ಮೋದಿ' ಸಿನಿಮಾ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ: ಸುಪ್ರೀಂ
ಸೆನ್ಸಾರ್ ಬೋರ್ಡ್ ಪ್ರಮಾಣಪತ್ರ ನೀಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಬಿಡುಗಡೆ ಮಾಡದಂತೆ ತಡೆ ನೀಡುವಂತೆ ಆದೇಶ ನೀಡಲು ...
ನವದೆಹಲಿ: ಸೆನ್ಸಾರ್ ಬೋರ್ಡ್ ಪ್ರಮಾಣಪತ್ರ ನೀಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಬಿಡುಗಡೆ ಮಾಡದಂತೆ ತಡೆ ನೀಡುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ವಿಷಯಗಳು ಏನು ಎಂಬುದನ್ನು ಅರ್ಜಿದಾರರು ಪಟ್ಟಿ ಮಾಡಿ ಕೋರ್ಟ್ ಗೆ ನೀಡಿದರೇ ಅರ್ಜಿಯನ್ನು ನಾಳೆ ವಿಚಾರಣೆ ಮಾಡಲು ಸಾಧ್ಯವಿರುತ್ತದೆ ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅರ್ಜಿದಾರರ ವಿಚಾರಣೆ ನಡೆಸಲು ನಿರಾಕರಿಸಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪ್ರದಾನಿ ಮೋದಿ ಜೀವನ ಚರಿತ್ರೆ ಬಿಡುಗಡೆಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ವಯಕ್ತಿಕವಾಗಿ ಒಬ್ಬರಿಗೆ ಏಕೆ ಸಿನಿಮಾದ ಪ್ರತಿ ನೀಡಬೇಕು ಎಂದು ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ,.
ತಡೆ ಏಕೆ ನೀಡಬೇಕು ಎಂದು ಅವರು ಬಯಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ, ಆದರೆ ಸಿನಿಮಾಗೆ ಇನ್ನೂ ಪ್ರಮಾಣ ಪತ್ರ ನೀಡಿಲ್ಲ ಎಂದು ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ