ಉಗ್ರರಿಗೆ ಹಣಪೂರೈಕೆ: ಎನ್ಐಎಯಿಂದ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಬಂಧನ

ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪು ಹಾಗೂ ಉಗ್ರರಿಗೆ ಹಣಸಹಾಯ ನೀಡಿದ ಪ್ರಕರಣ ಸಂಬಂಧ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ರಾಷ್ಟ್ರೀಯ ....
ಯಾಸಿನ್ ಮಲಿಕ್
ಯಾಸಿನ್ ಮಲಿಕ್
ನವದೆಹಲಿ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪು ಹಾಗೂ ಉಗ್ರರಿಗೆ ಹಣಸಹಾಯ ನೀಡಿದ ಪ್ರಕರಣ ಸಂಬಂಧ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ,
ಪ್ರಕರಣ ಸಂಬಂಧ ಅತನ ವಿಚಾರಣೆ ನಡೆಸಬೇಕೆಂದು ತನಿಖಾ ತಂಡ ಅನುಮತಿ ಕೇಳಿದ ಹಿನ್ನೆಲೆಯಲ್ಲಿ ಜಮ್ಮುವಿನ ಎನ್ ಐ ಎ ಕೋರ್ಟ್ ರಾಷ್ಟ್ರೀಯ ತನಿಖಾ ದಳದ ಕಸ್ಟಡಿಗೆ ನೀಡಿದೆ.
ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವಿನ ಜತೆಗೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಸರಕಾರಿ ಸ್ವತ್ತುಗಳನ್ನು ಹಾನಿಗೊಳಿಸುವುದು ಕಣಿವೆಯಲ್ಲಿ ಸಾಮಾನ್ಯವಾಗಿದೆ. ಈ ಕೃತ್ಯಗಳ ಹಿಂದಿನ ಸಂಚುಕೋರರನ್ನು ಗುರುತಿಸಲು ಎನ್‌ಐಎ ತನಿಖೆ ನಡೆಸುತ್ತಿದೆ. 
ಕಳೆದ ಫೆಬ್ರವರಿಯಲ್ಲಿ ಎನ್‌ಐಎ ತಂಡವು ಪ್ರತ್ಯೇಕತಾವಾದಿ ನಾಯಕರುಗಳಾದ ಉಮರ್‌ ಫಾರೂಕ್‌ , ಯಾಸಿನ್‌ ಮಲಿಕ್‌, ಸಯ್ಯದ್‌ ಅಲಿ ಶಾ ಗಿಲಾನಿ, ನಸೀಂ ಗಿಲಾನಿ ನಿವಾಸಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com