ಅಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಪ್ರಮುಖ ಮೂರು ವಲಯಗಳಾದ ಸರಕು ಮತ್ತು ಸೇವಾ ತೆರಿಗೆ, ದಿವಾಳಿತನ ಮತ್ತು ನೇರ ಲಾಭ ವರ್ಗಾವಣೆಯಂತಹ ವಿಚಾರಗಳಲ್ಲಿ ಇನ್ನೂ ಸಾಕಷ್ಟು ನಿಯಂತ್ರಣ ಸಾಧಿಸಬೇಕಿದೆ. ಇನ್ನು ಮೂಲಭೂತ ಸೌಕರ್ಯ ವಿಚಾರದಲ್ಲೂ ಸರ್ಕಾರ ಕೈಗೊಂಡ ಕ್ರಮಗಳು ಉತ್ತಮ ಫಲಿತಾಂಶ ನೀಡುತ್ತಿದೆ. ರಸ್ತೆ ನಿರ್ಮಾಣ, ರೈಲ್ವೇ, ನೀರು ಸರಬರಾಜು, ನಾಗರಿಕ ವಿಮಾನಯಾನ ಸೇವೆ, ಡಿಜಿಟಲೀಕರಣ ದಂತಹ ವಿಚಾರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂಜು ಹೇಳಿದರು.