ಬೆಂಜಮಿನ್ ನೇತನ್ಯಾಹು, ನರೇಂದ್ರ ಮೋದಿ
ದೇಶ
'ಯೇ ದೋಸ್ತ್' ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು ಟ್ವೀಟ್ ವೈರಲ್
ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಭಾರತದ ನೆರವಿಗೆ ಓಡೋಡಿ ಬರುವ ಇಸ್ರೇಲ್ ಪ್ರಧಾನಿ ಬೆಂಜಮೆನ್ ನೇತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ವೊಂದನ್ನು ಮಾಡಿದ್ದಾರೆ.
ನವದೆಹಲಿ: ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಭಾರತದ ನೆರವಿಗೆ ಓಡೋಡಿ ಬರುವ ಇಸ್ರೇಲ್ ಪ್ರಧಾನಿ ಬೆಂಜಮೆನ್ ನೇತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ವೊಂದನ್ನು ಮಾಡಿದ್ದಾರೆ.
ವಿಶ್ವ ಸ್ನೇಹ ದಿನಾಚರಣೆ ಹಿನ್ನೆಲೆಯಲ್ಲಿ ನೇತನ್ಯಾಹು ಅವರು ಪ್ರಧಾನಿಗೆ ಶುಭ ಕೋರಿದ್ದು ಟ್ವೀಟ್ ನಲ್ಲಿ ಯೇ ದೋಸ್ತಿ ಹಮ್ ನಹೀ ತೋಡೆಂಗೆ(ಈ ಸ್ನೇಹವನ್ನು ಎಂದೆಂದಿಗೂ ನಾವು ಕಳೆದುಕೊಳ್ಳುವುದಿಲ್ಲ) ಎಂದು ಬರೆದುಕೊಂಡಿದ್ದಾರೆ.
ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯು ಶುಭಾಶಯದ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ. ಭಾರತ ಮತ್ತು ನಮ್ಮ ಸ್ನೇಹ ಬಲಗೊಳ್ಳಲಿ ಹಾಗೂ ದ್ವಿಪಕ್ಷೀಯ ಸಂಬಂಧ, ಪಾಲುಗಾರಿಕೆ ಇನ್ನೂ ಉನ್ನತಕ್ಕೇರಲಿ ಎಂದು ಆಶಿಸುತ್ತೇನೆ ಎಂದು ಬರೆದಿದೆ.
ಟ್ವೀಟ್ ನಲ್ಲಿ ಮೋದಿ ಮತ್ತು ನೇತನ್ಯಾಹು ಅವರ ಜೊತೆಗಿನ ಫೋಟೋಗಳನ್ನು ಹಾಕಿ ಶೋಲೆ ಚಿತ್ರದ ಹಾಡಿನ ಮ್ಯೂಸಿಕ್ ಅನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ.
Happy #FriendshipDay2019 India!
May our ever strengthening friendship & #growingpartnership touch greater heights.


