ಕಲಂ 370ಯಿಂದ ಕಾಶ್ಮೀರದಲ್ಲಿ 3 ಕುಟುಂಬಗಳು ಮಾತ್ರ ಲಾಭ ಮಾಡಿಕೊಂಡಿವೆ, ಜನ ಸಾಮಾನ್ಯರಲ್ಲ: ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರದ ಜನತೆಯ ಅನುಕೂಲಕ್ಕಾಗಿ ಮಾಡಲಾಗಿದ್ದ ಸಂವಿಧಾನದ ಕಲಂ 370ಯಿಂದ ಕಾಶ್ಮೀರದಲ್ಲಿ ಕೇವಲ 3 ಕುಟುಂಬಗಳು ಮಾತ್ರ ಲಾಭ ಮಾಡಿಕೊಂಡಿವೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೇ ರೀತಿಯ ಲಾಭವಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ
ರಾಜ್ಯಸಭೆಯಲ್ಲಿ ಅಮಿತ್ ಶಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಜನತೆಯ ಅನುಕೂಲಕ್ಕಾಗಿ ಮಾಡಲಾಗಿದ್ದ ಸಂವಿಧಾನದ ಕಲಂ 370ಯಿಂದ ಕಾಶ್ಮೀರದಲ್ಲಿ ಕೇವಲ 3 ಕುಟುಂಬಗಳು ಮಾತ್ರ ಲಾಭ ಮಾಡಿಕೊಂಡಿವೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೇ ರೀತಿಯ ಲಾಭವಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಅಮಿತ್ ಶಾ ಅವರು, ಕಾಶ್ಮೀರದ ಪ್ರತ್ಯೇಕತಾವಾದಿಗಳು ಮತ್ತು ರಾಜಕೀಯ ಮುಖಂಡರ ವಿರುದ್ಧ ತೀವ್ರ ಕಿಡಿಕಾರಿದರು. ಈ ವೇಳೆ ತಿದ್ದುಪಡಿ ಮಸೂದೆ ಮಂಡಿಸಿ ಮಾತನಾಡಿದ ಅಮಿತ್ ಶಾ ಅವರು, 'ಜಮ್ಮು ಮತ್ತು ಕಾಶ್ಮೀರದ ಜನತೆಯ ಅನುಕೂಲಕ್ಕಾಗಿ ಮಾಡಲಾಗಿದ್ದ ಸಂವಿಧಾನದ ಕಲಂ 370ಯಿಂದ ಕಾಶ್ಮೀರದಲ್ಲಿ ಕೇವಲ 3 ಕುಟುಂಬಗಳು ಮಾತ್ರ ಲಾಭ ಮಾಡಿಕೊಂಡಿವೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೇ ರೀತಿಯ ಲಾಭವಾಗಿಲ್ಲ. ಹೀಗಾಗಿ ಕಲಂ 370ಯನ್ನು ರದ್ದು ಮಾಡಲು ಇನ್ನು ಒಂದು ಕ್ಷಣ ಕೂಡ ಯೋಚನೆ ಮಾಡಬಾರದು ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್ ಅವರು, ಕಲಂ 370 ದೇಶದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ ಎಂಬುದು ಶುದ್ಧ ಸುಳ್ಳು ಎಂದ ಅಮಿತ್ ಶಾ, ಮಹಾರಾಜ ಹರಿ ಸಿಂಗ್ ಅವರು 1947ರ ಅಕ್ಟೋಬರ್ 27ರಂದು ಜಮ್ಮು ಮತ್ತು ಕಾಶ್ಮೀರ ಇನ್ಸ್ ಟ್ರುಮೆಂಟ್ ಆಫ್ ಆಕ್ಸೆಷನ್ ಕಾಯ್ದೆಗೆ ಸಹಿ ಮಾಡಿದ್ದರು. ಆದರೆ 1954ರಲ್ಲಿ ಕಲಂ 370 ಜಾರಿಯಾಗಿದ್ದು, ಕಾಂಗ್ರೆಸ್ ಮುಖಂಡರು ಸುಳ್ಳಿನ ಮೂಲಕ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕಲಂ 370ಯನ್ನು ಜೀವಂತವಾಗಿಟ್ಟಿದ್ದರು ಎಂದು ಕಿಡಿಕಾರಿದರು.
ಅಂತೆಯೇ ಇಂದು ವಿರೋಧ ಮಾಡುತ್ತಿರುವ ಕಾಂಗ್ರೆಸ್ ಸದಸ್ಯರು ಈ ಹಿಂದೆ ಅಂದರೆ 1952 ಮತ್ತು 1962ರಲ್ಲಿ ಕಲಂ 370ಗೆ ತಿದ್ದಪುಡಿ ತರಲು ಮುಂದಾಗಿದ್ದರು. ಈಗ ಏಕೆ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com