ಸುಷ್ಮಾ ವ್ಯಕ್ತಿತ್ವಕ್ಕೆ ಮೆರುಗು ನೀಡಿದ ನಾಲ್ಕು ರಾಜ್ಯಗಳು..!

ಹಿರಿಯ ಬಿಜೆಪಿ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭಾರತೀಯ ರಾಜಕೀಯ ಪಡಸಾಲೆಯಲ್ಲಿ ಮಿನುಗಿದ ಮಹಾತಾರೆ.! ಆದರೆ ರಾಜಕೀಯ ಬೆಳವಣಿಗೆಗೆ, ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
Updated on
ನವದೆಹಲಿ: ಹಿರಿಯ ಬಿಜೆಪಿ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭಾರತೀಯ ರಾಜಕೀಯ ಪಡಸಾಲೆಯಲ್ಲಿ ಮಿನುಗಿದ ಮಹಾತಾರೆ.!  ಆದರೆ ರಾಜಕೀಯ ಬೆಳವಣಿಗೆಗೆ, ಅವರ ಮೇರು ವ್ಯಕ್ತಿತ್ವಕ್ಕೆ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳು ಪ್ರಮುಖ ಕೊಡುಗೆ ಕೊಟ್ಟಿವೆ ಎಂಬುದು ಇತಿಹಾಸ ಗಮನಿಸಬೇಕಾದ ಪ್ರಮುಖ ಸಂಗತಿಯೂ ಹೌದು. ಸತ್ಯವೂ ಹೌದು.
ವಿದೇಶಾಂಗ ವ್ಯವಹಾರಗಳ ಸಚಿವರಾಗಿ ತಮ್ಮ ಕೆಲಸದ ಮೂಲಕವೇ ಹೆಸರುವಾಸಿಯಾಗಿದ್ದರೂ  ಅವರ ರಾಜಕೀಯ ಜೀವನದಲ್ಲಿ ನಾಲ್ಕು ರಾಜ್ಯಗಳ ಜನರ ಆಳವಾದ, ಗಾಢವಾದ ಸಂಬಂಧ ಆಕೆಯ ವ್ಯಕ್ತಿತ್ವಕ್ಕೆ ಹೊಸ ಹೊಳಪು ನೀಡಿದ್ದವು.
ಬಳ್ಳಾರಿ ನಾಯಕರು ಮತ್ತು  ಜನರ ಜೊತೆ  ಕೊನೆಯತನಕ ನಿಕಟ ಸಂಬಂಧ ಇಟ್ಟುಕೊಂಡಿದ್ದರು. ರಾಜಕೀಯ ಬದುಕಿನ ಯಶೋಗಾಥೆಯಲ್ಲಿ ಬಳ್ಳಾರಿಯೂ ಬಹಳ ಪ್ರಮುಖ ಸ್ಥಾನ ಪಡೆದಿತ್ತು ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.  
ಅವರ ರಾಜಕೀಯ ಜೀವನದ ಯಶೋಗಾಥೆಗೆ  ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಪ್ರಮುಖವಾಗಿ ರಾಜಕೀಯ ಜೀವನದ ಉಜ್ವಲತೆಗೆ ನಾಂದಿ ಹಾಡಿವೆ.  
1996ರ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ದಕ್ಷಿಣ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿ  13 ದಿನಗಳ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ಬಳಿಕ 1998ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರಾಗಿದ್ದರು. ನಂತರ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು, 2000ರಲ್ಲಿ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದರು.ಮಧ್ಯಪ್ರದೇಶದ ವಿದಿಷ ಲೋಕಸಭಾ ಕ್ಷೇತ್ರದಿಂದ 2009 ಮತ್ತು 2014ರಲ್ಲಿ ಎರಡು ಬಾರಿ ಆಯ್ಕೆಯಾಗಿ ಆ ರಾಜ್ಯದ ಜನರ ಜೊತೆ ಆಳವಾದ ಸಂಬಂಧ ಹೊಂದಿದ್ದರು.
ತಮ್ಮ 25ನೇ ವಯಸ್ಸಿನಲ್ಲೇ ಹರಿಯಾಣದ ಅಂಬಾಲಾದಿಂದ ಶಾಸಕರಾಗಿ ಅಯ್ಕೆಯಾಗಿ ಆಗಿನ ದೇವಿ ಲಾಲ್ ಸರ್ಕಾರದಲ್ಲಿ ಸಚಿವರಾಗಿ, ಅತಿಕಿರಿಯ ವಯಸ್ಸಿನ ಶಾಸಕಿ ಎಂಬ ಕೀರ್ತಿಗಳಿಸಿಕೊಂಡಿದ್ದರು.
1999 ರಲ್ಲಿ ಕರ್ನಾಟಕದ ಬಳ್ಳಾರಿಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತ ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದರು . ಅದರೂ ಅವರು ಬಳ್ಳಾರಿ ಜನರ ಒಡನಾಟವನ್ನು ಬಿಡಲಿಲ್ಲ. ಪ್ರತಿ ವರ್ಷ ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಬಳ್ಳಾರಿಗೆ ತಪ್ಪದೆ ಭೇಟಿ ನೀಡುತ್ತಿದ್ದರು.   
ನಾಯಕರಾದ ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿ ಅವರನ್ನು ತಮ್ಮ ಅವಳಿ ಮಕ್ಕಳೆಂದೆ ಭಾವಿಸಿಕೊಂಡಿದ್ದರು. ಅವರ ಜೊತೆ ವಿಶೇಷವಾಗಿ ಬಳ್ಳಾರಿ ಜನರ ಜೊತೆ ಕೊನೆಯತನಕ ನಿಕಟ  ಸಂಬಂಧ ಇಟ್ಟುಕೊಂಡಿದ್ದರು. ರಾಜಕೀಯ ಬದುಕಿನ ಯಶೋಗಾಥೆಯಲ್ಲಿ  ಕರ್ನಾಟಕ ವಿಶೇಷವಾಗಿ ಬಳ್ಳಾರಿ ಪ್ರಮುಖ ಸ್ಥಾನ ಪಡೆದಿತ್ತು ಎಂಬುದನ್ನೂ ಅಲ್ಲಗಳೆಯಲು ಸಾಧ್ಯವೆ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com