ನನ್ನ ಜೀವಿತಾವಧಿಯಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ...: ಕೊನೆಯ ಟ್ವೀಟ್ ನಲ್ಲಿ ಸುಷ್ಮಾ ಸ್ವರಾಜ್ ಹೇಳಿದ್ದೇನು?

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕಳೆದ ರಾತ್ರಿ ದೆಹಲಿಯ ...
ಸುಷ್ಮಾ ಸ್ವರಾಜ್(ಸಂಗ್ರಹ ಫೋಟೋ)
ಸುಷ್ಮಾ ಸ್ವರಾಜ್(ಸಂಗ್ರಹ ಫೋಟೋ)
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕಳೆದ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ್ದಾರೆ. 
ಅವರು ನಿಧನಕ್ಕೂ ಮುನ್ನ ನಿನ್ನೆ ಸಾಯಂಕಾಲ 7.23ಕ್ಕೆ ಒಂದು ಟ್ವೀಟ್ ಮಾಡಿದ್ದಾರೆ. ಅದೀಗ ಭಾರೀ ವೈರಲ್ ಆಗಿದೆ. ಆ ಟ್ವೀಟ್ ಅನೇಕರಿಗೆ ಖುಷಿ ಕೊಟ್ಟಿದ್ದು ಮಾತ್ರವಲ್ಲದೆ ಕಣ್ಣಲ್ಲಿ ನೀರು ತರಿಸಿದ್ದು ಸುಳ್ಳಲ್ಲ.
''ಪ್ರಧಾನ ಮಂತ್ರಿಯವರೇ ನಿಮಗೆ ಧನ್ಯವಾದಗಳು, ನಿಮಗೆ ತುಂಬು ಧನ್ಯವಾದಗಳು, ನನ್ನ ಜೀವಿತಾವಧಿಯಲ್ಲಿ ಈ ದಿನವನ್ನು ನೋಡಲು ನಾನು ಕಾಯುತ್ತಿದ್ದೆ'' ಎಂದು ಟ್ವೀಟ್ ಮಾಡಿದ್ದರು. 
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನ ವಿಧಿ 370ನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದಕ್ಕಾಗಿ ಅವರು ತೀವ್ರ ಹರ್ಷಗೊಂಡಿದ್ದರು. ದೇಶಕ್ಕೆ ಸಂಬಂಧಪಟ್ಟ ವಿಚಾರವಿರಲಿ, ರಾಜಕೀಯ ವಿಚಾರವಿರಲಿ ಅವರು ಭಾರತೀಯ ಜನತಾ ಪಕ್ಷದಲ್ಲಿ ಅಗ್ರಪಂಕ್ತಿಯ ನಾಯಕರ ಜೊತೆಯಲ್ಲಿಯೇ ತಮ್ಮ ಜೀವಿತಾವಧಿಯಲ್ಲಿ ಹೋರಾಡಿದವರು. ಜಮ್ಮು-ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಕೂಡ ಅವರು ಹೋರಾಟ ಮಾಡಿಕೊಂಡು ಬಂದಿದ್ದರು. 
2014ರಿಂದ 2019ರ ಏಪ್ರಿಲ್ ವರೆಗೆ ವಿದೇಶಾಂಗ ಸಚಿವೆಯಾಗಿದ್ದಾಗ ಸುಷ್ಮಾ ಸ್ವರಾಜ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದರು. ಒಂದು ಟ್ವೀಟ್ ಮೂಲಕವೇ ಹಲವರ ಸಮಸ್ಯೆಗೆ ಸ್ಪಂದಿಸಿದ್ದು ಉಂಟು, ಹಲವರನ್ನು ಕಷ್ಟದಿಂದ ಪಾರು ಮಾಡಿದ್ದೂ ಇದೆ. 
ಇದಕ್ಕೂ ಮುನ್ನ ಮೊನ್ನೆ 5ನೇ ತಾರೀಖಿನಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಭಾಷಣ, ಅವರು ಪ್ರಕಟಿಸಿದ ಐತಿಹಾಸಿಕ ನಿರ್ಧಾರಕ್ಕೆ ಸಹ ಸುಷ್ಮಾ ಸ್ವರಾಜ್ ಅಭಿನಂದನೆ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com