'ಸರ್ಕಾರ ಭೂಮಿ ಪಡೆದಿದೆ, ಹೃದಯ ಗೆದ್ದಿಲ್ಲ' ಮೋದಿ ಮಾತಿಗೆ ಕಾಶ್ಮೀರಿಗಳ ಅಸಮಾಧಾನ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ದತಿ ಕ್ರಮವನ್ನು ಪ್ರಧಾನಿ ಮೋದಿ ಬಲವಾಗಿ ಸಮರ್ಥಿಸಿಕೊಂಡಿದ್ದರೂ ಅಲ್ಲಿನ ಜನತೆಗೆ ಮಾತ್ರ ಸಂತೋಷವಾಗಿಲ್ಲ. ಇದು ಪ್ರಜಾಸತಾತ್ಮಕ ವಿರೋಧಿ ಕ್ರಮ ಎಂದೇ ಹೇಳುತ್ತಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ದತಿ ಕ್ರಮವನ್ನು ಪ್ರಧಾನಿ ಮೋದಿ ಬಲವಾಗಿ ಸಮರ್ಥಿಸಿಕೊಂಡಿದ್ದರೂ ಅಲ್ಲಿನ ಜನತೆಗೆ ಮಾತ್ರ ಸಂತೋಷವಾಗಿಲ್ಲ. ಇದು ಪ್ರಜಾಸತಾತ್ಮಕ ವಿರೋಧಿ ಕ್ರಮ ಎಂದೇ ಹೇಳುತ್ತಿದ್ದಾರೆ.
ಕೇಂದ್ರ ಸರ್ಕಾರ ಭೂಮಿ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ, ಕಾಶ್ಮೀರಿಗಳ ಹೃದಯವನ್ನು ಗೆದ್ದಿಲ್ಲ ಎಂದು ಹಲವು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷ ಸ್ಥಾನಮಾನ ರದ್ದುಮಾಡಿ ಮೂಲಸೌಕರ್ಯ ಸಂಬಂಧಿತ ಚಟುವಟಿಕೆ ಕೈಗೊಳ್ಳುವುದರಿಂದ ಪರಿಸರ ಸೂಕ್ಷ್ಮ ಪ್ರಾಂತ್ಯಕ್ಕೆ ಸಾಕಷ್ಟು ಹಾನಿಯಾಗಲಿದೆ ಎಂದು ಅಲ್ಲಿನ ವಿದ್ಯಾರ್ಥಿಗಳಿಂದ ಹಿಡಿದು ಅನೇಕ ವೃತ್ತಿಪರರವರೆಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
370ನೇ ವಿಧಿ ರದ್ದುಮಾಡಿ ಹೋಟೆಲ್, ಫ್ಲೈ ಒವರ್, ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಪೋರೇಟ್ ಕ್ಷೇತ್ರಗಳಿಗೆ ಮುಕ್ತ ಅವಕಾಶ ನೀಡುವುದರಿಂದ  ಸುಂದರ ಪರಿಸರದ ಮೇಲೆ ಹಾನಿಯಾಗಲಿದೆ ಎಂದು ಕಾಶ್ಮೀರದ ಪತ್ರಕರ್ತರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಉತ್ತರ್ ಖಂಡ್ ರಾಜ್ಯಗಳನ್ನು ಉದಾಹರಣೆಯಾಗುವ ನೀಡುವ ಅವರು, ಅಲ್ಲಿ ಮನೆಗಳು, ಕಟ್ಟಡಗಳ ನಿರ್ಮಾಣದಿಂದ ಹೇಗೆ ನದಿಗಳಿಗೆ ಹಾನಿಯಾಗುತ್ತಿದೆ ಎಂಬುದುನ್ನು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.
ಸರ್ಕಾರ ಕಾಶ್ಮೀರದ ಭೂಮಿಯನ್ನು ಮಾತ್ರ ಪಡೆದಿದೆ.ಆದರೆ, ಅಲ್ಲಿನ ಜನರ ಹೃದಯವನ್ನು ಗೆದ್ದಿಲ್ಲ ಎಂದು ದೆಹಲಿ ಮೂಲದ ಪಿಜಿಯೋಥೆರಪಿಸ್ಟ್  ಅಜಜ್ ಅಹ್ಮದ್ ಆರೋಪಿಸಿದ್ದಾರೆ.
 ನಮ್ಮ ನಂಬಿಕೆ ಉಳಿಸಿಕೊಳ್ಳಬೇಕಾದರೆ ಮೊದಲು ನಮ್ಮ ವಿಶ್ವಾಸ ಪಡೆದುಕೊಳ್ಳಬೇಕಾಗುತ್ತದೆ. ಜಾತ್ಯಾತೀತ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಚರ್ಚೆ ನಡೆಸಬೇಕಾಗಿದೆ. ನಮ್ಮ ಕುಟುಂಬದವರು ತುರ್ತು ಪರಿಸ್ಥಿತಿಯಲ್ಲಿ ವಾಸಿಸಬೇಕಾಗಿದೆ. ಅವರಿಗೆ ಅಂಬ್ಯುಲೆನ್ಸ್ ಕೂಡಾ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
 ಪ್ರಧಾನಿ ಮೋದಿ ಮಾತಿನಲ್ಲಿ ಸ್ಪಷ್ಟತೆ ಇಲ್ಲ, ವಾಸ್ತವಿಕ ಅಂಶದ ಕೊರತೆಯಿದೆ. ಸಂವಿಧಾನದ 370 ನೇ ವಿಧಿ ರದ್ದತಿಯಿಂದಾಗಿ ಅಲ್ಲಿನ ಅಭಿವೃದ್ದಿಯಾಗುವುದಿಲ್ಲ ಎಂದು ದೆಹಲಿಯಲ್ಲಿರುವ ಕಾಶ್ಮಿರಿ ಪತ್ರಕರ್ತರೊಬ್ಬರು ಆರೋಪಿಸಿದ್ದಾರೆ. 
ಅಭಿವೃದ್ದಿಮಾಡುವುದಾಗಿ ಹೇಳುವ ಪ್ರಧಾನಿ ಮೋದಿ, ವಿಶ್ವದಾದ್ಯಂತ ಮಾರಾಟ ಮಾಡುತ್ತಿರುವ  ಕಾಶ್ಮೀರಿ ಶಾಲುಗಳು, ಸೇಬುಗಳು, ಗಿಡಮೂಲಿಕೆಗಳ ಮಾರಾಟವನ್ನು ನಿಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಸಾಕ್ಷರತೆ ಹಾಗೂ ಆರೋಗ್ಯ ಸೂಚ್ಯಂಕ ಮತ್ತಿತರ ಕ್ಷೇತ್ರಗಳಲ್ಲಿ ಜಮ್ಮು- ಕಾಶ್ಮೀರ ಇತ್ತರ ರಾಜ್ಯಗಳಿಗಿಂತಲೂ ಉತ್ತಮವಾಗಿದ್ದರೂ ಅಭಿವೃದ್ದಿಗಾಗಿ 370 ನೇ ವಿಧಿ ರದ್ದುಮಾಡಿರುವುದಾಗಿ ಪ್ರಧಾನಿ ಏಕೆ ಹೇಳುತ್ತಾರೆ. ಕೆಲವೇ ಮಂದಿಯಷ್ಟೇ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಭಿವೃದ್ದಿ ಮಾಡುವುದಾಗಿ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ, ಅಂಕಿಅಂಶಗಳ ಪ್ರಕಾರ ಜಮ್ಮು- ಕಾಶ್ಮೀರಕ್ಕಿಂತ ಗುಜರಾತ್ ಅನೇಕ ವಿಚಾರಗಳಲ್ಲಿ ಕೊರತೆ ಎದುರುಸುತ್ತಿದೆ ಎಂದು ಜವಹರ್ ಲಾಲ್ ನೆಹರೂ ವಿದ್ಯಾರ್ಥಿ  ಒಕ್ಕೂಟದ ಕಾರ್ಯದರ್ಶಿ ಏಜಜ್ ಅಹ್ಮದ್ ರಾಥೆರ್  ಟೀಕಿಸಿದ್ದಾರೆ.
ಸರ್ಕಾರ ಈಗ ಕೈಗೊಂಡಿರುವ ಕ್ರಮಕ್ಕೆ ಮುಂದೊಂದು ದಿನ ವಿಷಾದ ವ್ಯಕ್ತಪಡಿಸಲಿದೆ. ನಮ್ಮ ಐಡೆಂಟಿಯನ್ನೇ ಕಿತ್ತುಕೊಂಡಿದೆ. ಕಾಶ್ಮೀರದಲ್ಲಿ ಈಗ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ  ಜಮ್ಮು- ಕಾಶ್ಮೀರ ಮತ್ತು ಲಡಾಕ್ ಪ್ರದೇಶದ ಜನರಿಗೆ ನೀಡಿರುವ ಲಾಭಗಳು ಅವಾಸ್ತವಿಕತೆಯಿಂದ ಕೂಡಿವೆ ಎಂದು ಅನೇಕ ಕಾಶ್ಮೀರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com