ವೈನಾಡು: ದೇವಾಲಯ, ಮಸೀದಿ, ಅಂಚೆ ಕಚೇರಿ ಮತ್ತು ಪ್ಲಾಂಟೇಶನ್ ಕಂಪನಿಯ ಕ್ಯಾಂಟೀನ್‌ನೊಂದಿಗೆ ಸುಮಾರು 100 ಎಕರೆ ಚಹಾ ಎಸ್ಟೇಟ್ ಜಮೀನು- ಹೀಗೆ ನ್ನಾ ಜನವಸತಿ ಪ್ರದೇಶಗಳನ್ನು ಒಳಗೊಂಡಿದ್ದ ಕೇರಳದ ಪುದುಮಲೈ ಗ್ರಾಮವು ಗುರುವಾರ ನೀರಿನಲ್ಲಿ ಸಂಪೂರ್ಣ ಜಲಸಮಾಧಿಯಾಗಿದೆ. ಸುಂದರ ವೈನಾಡಿನ ಬೆಟ್ಟ ಪ್ರದೇಶದ ಪಟ್ಟಣ ಮೆಪ್ಪಾಡಿಯಿಂದ 11 ಕಿ.ಮೀ ದೂರದಲ್ಲಿದ್ದ ಈ ಗ್ರಾಮ ಕೇರಳದಲ್ಲಿ ವರುಣನ ರುದ್ರ ನರ್ತನಕ್ಕೆ ಆಹುತಿಯಾಗಿದೆ.