ದೇಶದೆಲ್ಲೆಡೆ ಮುಸ್ಲಿಂರು ಈದ್ ಆಚರಿಸುತ್ತಿದ್ದರೆ, ಕಾಶ್ಮೀರದಲ್ಲಿ ಏನಾಗುತ್ತಿದೆ?

ಬಕ್ರೀದ್ ಎಂದರೆ ತ್ಯಾಗ, ಬಲಿದಾನದ ಸಂಕೇತದ ಆಚರಣೆ, ನಮ್ಮನ್ನು ನಾವೇ ಇಲ್ಲಿ ತ್ಯಾಗ ಮಾಡಿಕೊಳ್ಳುತ್ತೇವೆ, ಯಾಕೆಂದರೆ ಇನ್ನು ಸರ್ಕಾರ ನಮ್ಮಿಂದ ತೆಗೆದುಕೊಳ್ಳಲು ಬಾಕಿ ಇರುವುದು ಅದೊಂದೆ. ನಮ್ಮ ಹಕ್ಕುಗಳು, ಮೂಲಭೂತ ಹಕ್ಕುಗಳನ್ನು ಕೂಡ ಕಸಿದಿದ್ದಾರೆ
ದೇಶದೆಲ್ಲೆಡೆ ಮುಸ್ಲಿಂರು ಈದ್ ಆಚರಿಸುತ್ತಿದ್ದರೆ, ಕಾಶ್ಮೀರದಲ್ಲಿ ಏನಾಗುತ್ತಿದೆ?

ಶ್ರೀನಗರ: ಬಕ್ರೀದ್ ಎಂದರೆ ತ್ಯಾಗ, ಬಲಿದಾನದ ಸಂಕೇತದ ಆಚರಣೆ, ನಮ್ಮನ್ನು ನಾವೇ ಇಲ್ಲಿ ತ್ಯಾಗ ಮಾಡಿಕೊಳ್ಳುತ್ತೇವೆ, ಯಾಕೆಂದರೆ ಇನ್ನು ಸರ್ಕಾರ ನಮ್ಮಿಂದ ತೆಗೆದುಕೊಳ್ಳಲು ಬಾಕಿ ಇರುವುದು ಅದೊಂದೆ. ನಮ್ಮ ಹಕ್ಕುಗಳು, ಮೂಲಭೂತ ಹಕ್ಕುಗಳನ್ನು ಕೂಡ ಕಸಿದಿದ್ದಾರೆ. ಈ ವರ್ಷ ನಾವು ಏನು ಆಚರಿಸುವುದು ಮತ್ತು ಯಾರ ಜೊತೆ ಆಚರಿಸುವುದು ಎಂದು ಆಶ್ಚರ್ಯದಿಂದ ಕೇಳುತ್ತಾರೆ ಗುಲಾಮ್ ಮೆಹಮ್ಮೂದ್.


ಇವರ ಮಾತಿಗೆ ಅಲ್ಲಿದ್ದ ಇತರರು ಕೂಡ ದನಿಗೂಡಿಸಿದರು. ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನ ವಿಧಿ 370 ತೆಗೆದುಹಾಕಿದ ನಂತರ ಈ ಬಾರಿಯ ಈದ್ -ಉಲ್-ಜುಹಾ ಭದ್ರತಾ ಪಡೆಗಳಿಗೆ ಮತ್ತು ಸ್ಥಳೀಯರಿಗೆ ದೊಡ್ಡ ಪರೀಕ್ಷೆ ಎಂದು ಹೇಳಬಹುದು. ಸುಮಾರು 30 ವರ್ಷಗಳ ನಂತರ ಯಾವುದೇ ರೀತಿಯ ಸಂವಹನ, ಸಂಪರ್ಕಗಳಿಲ್ಲದೆ ಕಣಿವೆ ರಾಜ್ಯ ಕಾಶ್ಮೀರದ ಜನತೆ ಆಚರಿಸುತ್ತಿರುವ ಮೊದಲ ಈದ್ ಹಬ್ಬ ಎಂದೇ ಹೇಳಬಹುದು. ಹೀಗಾಗಿ ಭಯ, ಆತಂಕ, ಅನಿಶ್ಚಿತತೆಗಳ ನಡುವೆಯೇ ಮುಸ್ಲಿಂರು ಈದ್ ಆಚರಿಸುತ್ತಿದ್ದಾರೆ.


ಸಾಮಾನ್ಯವಾಗಿ ಇಲ್ಲಿನ ಜನರು ಈದ್ ಆಚರಣೆಗೆ ಮುನ್ನ ತಮ್ಮ ನಂಟರಿಷ್ಟರನ್ನು, ಪ್ರೀತಿಪಾತ್ರರನ್ನು ಭೇಟಿ ಮಾಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಸಂತೋಷ ಹಂಚಿಕೊಳ್ಳುವುದು ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ತಮ್ಮ ಸಂಬಂಧಿಕರನ್ನು, ಇಷ್ಟಪಾತ್ರರನ್ನು ಭೇಟಿ ಮಾಡಲು ಇಲ್ಲಿನ ಜನರಿಗೆ ಸಾಧ್ಯವಾಗುತ್ತಿಲ್ಲ. ಕಾಶ್ಮೀರದಲ್ಲಿ ಕೆಲಸ ಮಾಡುವವರು, ಶಿಕ್ಷಣ ಅಧ್ಯಯನ ಮಾಡುವವರು ಕೂಡ ತಮ್ಮ ಕುಟುಂಬಸ್ಥರನ್ನು ಈದ್ ಸಂಭ್ರಮದ ಸಮಯದಲ್ಲಿ ಭೇಟಿ ಮಾಡುತ್ತಾರೆ. ಆದರೆ ಈ ಬಾರಿ ತಮ್ಮ ಸಂಬಂಧಿಕರಿಗೆ ನೀವು ಇಲ್ಲಿಗೆ ಬರುವುದು ಬೇಡ ಎಂದು ಹೇಳಿಬಿಟ್ಟಿದ್ದಾರೆ.


ನಮ್ಮ ಮನೆ ಇರುವ ಸ್ಥಳದಲ್ಲಿಯೇ ಸುತ್ತಮುತ್ತ ಭೂತ ಆವರಿಸದಂತಹ ಅನುಭವವಾಗುತ್ತಿದೆ. ಈದ್ ಸಂಭ್ರಮ ವೇಳೆ ಕಾಶ್ಮೀರದಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. 2016ರಲ್ಲಿ ಬುರ್ಹಾನ್ ವಾನಿಯನ್ನು ಕೊಂದ ಸಮಯದಲ್ಲಿ ಕೂಡ ಇರಲಿಲ್ಲ. 90ರ ದಶಕದ ಆದಿಭಾಗದಲ್ಲಿ ಭಯೋತ್ಪಾದಕರ ಉಪಟಳ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೂಡ ಇಂತಹ ಪರಿಸ್ಥಿತಿಯಿರಲಿಲ್ಲ. ನಮಗೇಕೆ ಈಗ ಈ ಶಿಕ್ಷೆ ಎಂದು 78 ವರ್ಷದ ವಯೋವೃದ್ಧ ವಾನಿ ಕೇಳುತ್ತಾರೆ.


ಹಬ್ಬ ಆಚರಣೆ ಇಲ್ಲದಿರುವುದರಿಂದ ಆಡು ಮತ್ತು ಕುರಿ ಮಾರಾಟದ ಮೇಲೆ ಕೂಡ ಗಾಢ ಪರಿಣಾಮ ಬೀರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com