ಉತ್ತರಾಖಂಡಕ್ಕೆ ರಕ್ಷಣಾ ತಂಡದ ರವಾನೆ
ಉತ್ತರಾಖಂಡಕ್ಕೆ ರಕ್ಷಣಾ ತಂಡದ ರವಾನೆ

ಉತ್ತರ ಖಂಡದಲ್ಲಿ ಮೇಘಸ್ಫೋಟ; ಸಮರೋಪಾದಿಯಲ್ಲಿ ಸಾಗಿದ ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡದಲ್ಲಿ ಸಂಭವಿಸಿರುವ ಮೇಘಸ್ಫೋಟದ ಪರಿಣಾಮ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ತುರ್ತಾಗಿ ಎರಡು ಸೇನಾ ಹೆಲಿಕಾಪ್ಟರ್, ಮೂರು ವೈದ್ಯಕೀಯ ತಂಡ ರವಾನೆ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸಂಭವಿಸಿರುವ ಮೇಘಸ್ಫೋಟದ ಪರಿಣಾಮ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಉತ್ತರ ಕಾಶಿಗೆ ತುರ್ತಾಗಿ 2 ಸೇನಾ ಹೆಲಿಕಾಪ್ಟರ್ ಗಳನ್ನು ರವಾನೆ ಮಾಡಲಾಗಿದ್ದು, ಮೂರು ವೈದ್ಯಕೀಯ ತಂಡಗಳನ್ನು ರವಾನೆ ಮಾಡಲಾಗಿದೆ. ಅಲ್ಲದೆ ಉತ್ತರಾಖಂಡಕ್ಕೆ ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ರಕ್ಷಣೆಗೆ ರವಾನಿಸಲಾಗಿದ್ದು, ಇವರೊಂದಿಗೆ ರಕ್ಷಣಾ ಕಾರ್ಯಾಚರಣೆ ಹಗ್ಗಗಳು, ಸ್ಯಾಟೆಲೈಟ್ ಸಂವಹನ ಪರಿಕರಗಳನ್ನು ಮೊರಿಯ ಅರಕೋಟ್ ಗೆ ರವಾನೆ ಮಾಡಲಾಗಿದೆ. 

ಇನ್ನು ನಿನ್ನೆ ಉತ್ತರಾಖಂಡದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿ ಭಾರಿ ಪ್ರಮಾಣದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಛ 6 ಮಂದಿ ಸಾವನ್ನಪ್ಪಿದ್ದರು. ಉತ್ತರ ಖಂಡದ ಉತ್ತರ ಕಾಶಿಯ ಮೋರಿ ತೆಹ್ಸಿಲ್ ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಭಾರಿ ಮಳೆ ಮತ್ತು ಭೀಕರ ಪ್ರವಾಹ ಏರ್ಪಟ್ಟಿದೆ. ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಮನೆಯೊಂದು ಪ್ರವಾಹಕ್ಕೆ ಸಿಲುಕಿ ಉರುಳಿದ್ದು, ಅದರಲ್ಲಿದ್ದ ತಾಯಿ ಮತ್ತು ಮಗು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. 35 ವರ್ಷದ ರೂಪಾದೇವಿ ಮತ್ತು 9 ತಿಂಗಳ ಮಗು ಸಾವನ್ನಪ್ಪಿದೆ. ಮನೆ ಕೊಚ್ಚಿಹೋದ ಸಂದರ್ಭದಲ್ಲಿ ತಾಯಿ ಮತ್ತು ಮಗು ಒಳಗೆ ನಿದ್ರಿಸುತ್ತಿದ್ದರು ಎನ್ನಲಾಗಿದೆ. 

ತಾಯಿ ಮಗು ಸೇರಿದಂತೆ ಮೇಘಸ್ಫೋಟಕ್ಕೆ ಚಮೋಲಿಯ ಘಾಟ್ ಪ್ರದೇಶದಲ್ಲೇ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ, ಇನ್ನು ಮೇಘಸ್ಫೋಟ ಸಂಭವಿಸಿದ ಬೆನ್ನಲ್ಲೇ ಉತ್ತರಾಖಂಡಕ್ಕೆ ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ರಕ್ಷಣೆಗೆ ರವಾನಿಸಲಾಗಿದೆ. ಇನ್ನು ಈಗಾಗಲೇ ಸ್ಥಳೀಯ ರಕ್ಷಣಾ ತಂಡ ಕೂಡ ಸ್ಥಳಕ್ಕೆ ಧಾವಿಸಿದೆ.
 

Related Stories

No stories found.

Advertisement

X
Kannada Prabha
www.kannadaprabha.com