ಪಿ ಚಿದಂಬರಂ ಬಂಧನ ಬೆನ್ನಲ್ಲೇ, ಅಮಿತ್ ಶಾರ ಹಳೆಯ ವಿಡಿಯೋ ವೈರಲ್!

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಬಂಧನವಾಗುತ್ತಿದ್ದಂತೆಯೇ ಇತ್ತ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಂದು ಸಿಬಿಐ ಬಂಧನಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅಮಿತ್ ಶಾ

ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಬಂಧನವಾಗುತ್ತಿದ್ದಂತೆಯೇ ಇತ್ತ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಮಿತ್ ಶಾರನ್ನು ಅಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಅಮಿತ್ ಶಾ ತಾವು ನಿರಪರಾಧಿಯಾಗಿದ್ದು, ನಿರ್ದೋಷಿಯಾಗಿ ವಾಪಸ್ ಬರುತ್ತೇನೆ ಎಂದು ಹೇಳಿದ್ದರು.

'ನನ್ನ ವಿರುದ್ಧ ದೂರು ದಾಖಲಾದಾಗ ನಾನು ಹೆದರಲಿಲ್ಲ. ನಾನು ನೇರವಾಗಿ ಸಿಬಿಐ ಕಚೇರಿಗೆ ಹೋಗಿದ್ದೆ. ತಪ್ಪು ಮಾಡದೇ ಇದ್ದರೆ ನಾನು ಯಾಕೆ ಹೆದರಬೇಕು? ನಾನು ಪಲಾಯನವಾದಿಯಲ್ಲ. ಮಾಧ್ಯಮಗಳಿಗೆ ಚಾರ್ಜ್ ಶೀಟ್ ಸಿಕ್ಕಿದೆ. ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಾಗಿದೆ. ಚಾರ್ಜ್ ಶೀಟ್ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಬಳಿಕ ಕಾನೂನು ಹೋರಾಟ ಮಾಡುತ್ತೇನೆ. ನನಗೆ ನ್ಯಾಯಾಲಯದಲ್ಲಿ ವಿಶ್ವಾಸವಿದೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ರಾಜಕೀಯವಾಗಿ ಯಾವ ಹೋರಾಟ ಮಾಡಬೇಕೋ ಆ ಹೋರಾಟವನ್ನು ರಾಜಕೀಯ ಅಂಗಳದಲ್ಲಿ ಮಾಡುತ್ತೇನೆ. ಈ ಪ್ರಕರಣದಲ್ಲಿ ಆರೋಪ ಮುಕ್ತವಾಗಿ ಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ” ಎಂದು ಅಮಿತ್ ಶಾ ಈ ವಿಡಿಯೋದಲ್ಲಿ ಹೇಳಿದ್ದರು.

ಇದೇ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಅಮಿತ್ ಶಾ ತಮ್ಮ ವಿರುದ್ಧದ ಪ್ರಕರಣವನ್ನು ನಿಭಾಯಿಸಿದ ರೀತಿಗೂ ಚಿದಂಬರಂ ಅವರು ನಿಭಾಯಿಸಿದ ರೀತಿಯನ್ನು ತೋರಿಸಿ ಬಿಜೆಪಿ ಕಾರ್ಯಕರ್ತರು ವ್ಯಂಗ್ಯ ಮಾಡುತ್ತಿದ್ದಾರೆ.

ತಾವೇ ಉದ್ಘಾಟಿಸಿದ ಸಿಬಿಐ ಕಟ್ಟಡದಲ್ಲೇ ಚಿದಂಬರಂ ವಿಚಾರಣೆ
ಇನ್ನು ಪಿ ಚಿದಂಬರಂ 9 ವರ್ಷಗಳ ಹಿಂದೆ ತಾವೇ ಉದ್ಘಾಟಿಸಿದ್ದ ಸಿಬಿಐ ಕೇಂದ್ರ ಕಚೇರಿಯಲ್ಲಿ ಇಂದು ತಾವೇ ಆರೋಪಿಯಾಗಿ ಬಂಧನಕ್ಕೀಡಾಗಿದ್ದಾರೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು 2011 ರಲ್ಲಿ ಗೃಹ ಮಂತ್ರಿಯಾಗಿದ್ದ ಚಿದಂಬರಂ ಉದ್ಘಾಟಿಸಿದ್ದರು. ಈಗ ಬಂಧನವಾಗಿರುವ ಚಿದಂಬರಂ ಅವರನ್ನು ಕಚೇರಿಯ ಲಾಕಪ್ ನಲ್ಲಿ ಇಡಲಾಗಿದೆ. ಕೆಳ ಅಂತಸ್ತಿನ ಸೂಟ್ ನಂಬರ್ 5ನೇ ಗೆಸ್ಟ್ ರೂಂನಲ್ಲಿ ಚಿದಂಬರಂ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com