ಉರುಳಿದ ಕಾಲ ಚಕ್ರ: ಚಿದಂಬರಂ ಗೃಹ ಸಚಿವರಾಗಿದ್ದಾಗ ಅಮಿತ್ ಶಾ ರನ್ನು ಬಂಧಿಸಿದ್ದ ಸಿಬಿಐ! 

10 ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದವರಿಗೆ ಇಂದು ಸಂಕಷ್ಟ ಎದುರಾಗಿದೆ. ಚಿದಂಬರಂ ಅವರ ಬಂಧನವನ್ನು ಕಾಂಗ್ರೆಸ್ ರಾಜಕೀಯ ದ್ವೇಷ ಎಂದು ಆರೋಪಿಸಿದೆ.
ಅಮಿತ್ ಶಾ-ಚಿದಂಬರಂ
ಅಮಿತ್ ಶಾ-ಚಿದಂಬರಂ

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ.

10 ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದವರಿಗೆ ಇಂದು ಸಂಕಷ್ಟ ಎದುರಾಗಿದೆ. ಚಿದಂಬರಂ ಅವರ ಬಂಧನವನ್ನು ಕಾಂಗ್ರೆಸ್ ರಾಜಕೀಯ ದ್ವೇಷ ಎಂದು ಆರೋಪಿಸಿದೆ. ಇದೇ ರೀತಿಯ ಆರೋಪವನ್ನು 10 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಮಾಡಿತ್ತು. ಅಂದು ಗುಜರಾತ್ ನ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರನ್ನು ಸಿಬಿಐ ಸೋಹ್ರಾಬುದ್ಧೀನ್ ಶೇಖ್ ಎನ್ ಕೌಂಟರ್ ಪ್ರಕರಣದಲ್ಲಿ ಬಂಧಿಸಿತ್ತು. ಅಂದು ಕೇಂದ್ರದ ಗೃಹ ಸಚಿವರಾಗಿದ್ದವರು ಇಂದು ಐಎನ್ ಎಕ್ಸ್ ಮೀಡಿಯಾ ಹಗರಣದ ಆರೋಪದಲ್ಲಿ ಬಂಧನಕ್ಕೊಳಗಾದ ಪಿ.ಚಿದಂಬರಂ!

ಸುಮಾರು 60 ಪ್ರಕರಣಗಳಲ್ಲಿ ಬೇಕಿದ್ದ ಕ್ರಿಮಿನಲ್ ಸೋಹ್ರಾನುದ್ಧೀನ್ ನ್ನು 2005 ರಲ್ಲಿ ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ್ದರು.  ಅಮಿತ್ ಶಾ ಅನುಮತಿಯ ಮೇರೆಗೆ ಎನ್ ಕೌಂಟರ್ ಮಾಡಲಾಗಿತ್ತು, ಇದು ನಕಲಿ ಎನ್ ಕೌಂಟರ್ ಎಂಬ ಆರೋಪವಿದ್ದ ಪ್ರಕರಣವನ್ನು ಸಿಬಿಐ ಗೆ 2010 ರ ಜನವರಿಯಲ್ಲಿ ವಹಿಸಲಾಗಿತ್ತು. ಅಂದು ಗೃಹ ಸಚಿವರಾಗಿದ್ದವರು ಇದೇ ಚಿದಂಬರಂ!

2010 ರ ಜುಲೈ ನಲ್ಲಿ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿ ಹತ್ಯೆಯ ಆರೋಪ ಪಟ್ಟಿ ದಾಖಲಿಸಿತ್ತು. ಅಮಿತ್ ಶಾ ಜಾಮೀನು ಅರ್ಜಿ ಸಲ್ಲಿಸಿದ್ದಾಗ ಗುಜರಾತ್ ಹೈಕೋರ್ಟ್ ನಲ್ಲಿ ಸಿಬಿಐ ವಿರೋಧಿಸಿತ್ತು. 3 ತಿಂಗಳ ನಂತರ 2010 ರ ಅಕ್ಟೋಬರ್ 29 ರಂದು ಅಮಿತ್ ಶಾಗೆ ಜಾಮೀನು ಮಂಜೂರಾಗಿತ್ತು. ಆದರೆ 2010-12 ರ ವರೆಗೆ ಗುಜರಾತ್ ಪ್ರವೇಶಿಸದಂತೆ ಅಮಿತ್ ಶಾಗೆ ಕೋರ್ಟ್ ಆದೇಶಿಸಿತ್ತು. ಅಂದು ಬಂಧನಕ್ಕೊಳಗಾಗಿದ್ದ ಅಮಿತ್ ಶಾ ಚಿದಂಬರಂ ಹಾಗೂ ಕಾಂಗ್ರೆಸ್ ವಿರುದ್ಧ ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಲು ಸಿಬಿಐ ನ್ನು ಬಳಸಿಕೊಳ್ಳುತ್ತಿರುವ ಆರೋಪ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com