ಫ್ರಾನ್ಸ್, ಸಂಯುಕ್ತ ಅರಬ್ ರಾಷ್ಟ್ರ, ಬಹರೇನ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸ ಆರಂಭ

ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಸಂಯುಕ್ತ ಅರಬ್ ರಾಷ್ಟ್ರ ಮತ್ತು ಬಹರೇನ್  ರಾಷ್ಟ್ರಗಳ ಪ್ರವಾಸಕ್ಕಾಗಿ ಇಂದು ಪ್ರಯಾಣ ಬೆಳೆಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಸಂಯುಕ್ತ ಅರಬ್ ರಾಷ್ಟ್ರ ಮತ್ತು ಬಹರೇನ್  ರಾಷ್ಟ್ರಗಳ ಪ್ರವಾಸಕ್ಕಾಗಿ ಇಂದು ಪ್ರಯಾಣ ಬೆಳೆಸಿದರು

 “ಮೂರೂ ರಾಷ್ಟ್ರಗಳಲ್ಲಿ ನಮ್ಮ ಬಹುಮುಖಿ ಸಹಭಾಗಿತ್ವವನ್ನು ವರ್ಧಿಸುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 22 ರಿಂದ 26 ರವರೆಗೆ ಫ್ರಾನ್ಸ್, ಯುಎಇ ಮತ್ತು ಬಹರೇನ್ ದೇಶಗಳಿಗೆ ದ್ವಿಪಕ್ಷೀಯ ಭೇಟಿಗಾಗಿ ತೆರಳುತ್ತಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೊನ್ ಅವರ ವಿಶೇಷ ಆಹ್ವಾನದ ಮೇರೆಗೆ, 2019 ರ ಜಿ -7 ಶೃಂಗಸಭೆಯಲ್ಲಿ ಪ್ರಧಾನಿ ಬೈಯರಿಟ್ಜ್ ಪಾಲುದಾರರಾಗಿ ಭಾಗವಹಿಸಲಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರಣಿ ಟ್ವೀಟ್ ನಲ್ಲಿ, “ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಪ್ರಧಾನಿ ಎಡ್ವರ್ಡ್ ಫಿಲಿಪ್ ಅವರ ಜೊತೆ ದ್ವಿಪಕ್ಷೀಯ ಚರ್ಚೆ ನಡೆಸಲು ಉತ್ಸುಕನಾಗಿರುವೆ. ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದೊಡನೆ ಸಂವಾದ ನಡೆಸುವುದರ ಜೊತೆಗೆ, 1950 ಮತ್ತು 60ರ ದಶಕದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದ ಭಾರತೀಯರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಾಗುವುದು”ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, “ಬಹರೇನ್ ದೇಶದಲ್ಲಿಯೂ ಭಾರತೀಯ ಸಮುದಾಯದೊಡನೆ ಸಂವಾದ ನಡೆಸಲಾಗುವುದು.  ಗಲ್ಫ್ ಪ್ರದೇಶದ ಅತಿ ಹಳೆಯ ದೇಗುಲವೆನಿಸಿರುವ ಶ್ರೀನಾಥ್ ಜೀ ದೇವಾಲಯದ ಪುನರ್ ನವೀಕರಣದ ನಿಮಿತ್ತ ಆಯೋಜಿಸಿರುವ ಸಮಾರಂಭದಲ್ಲಿ ಭಾಗಿಯಾಗುವುದು ಹೆಮ್ಮೆಯ ವಿಷಯ ಎಂದಿದ್ದಾರೆ

 ಬಹರೇನ್ ದೇಶಕ್ಕೆ ತಾವು ನೀಡುತ್ತಿರುವ ಭೇಟಿ, ಭಾರತೀಯ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ  ಅಲ್ಲಿನ ಪ್ರಧಾನಿ, ದೊರೆ ಶೇಖ್ ಕಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಮತ್ತು ಬಹರೇನ್ ದೊರೆ ಶೇಖ್ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರ ಭೇಟಿಗಾಗಿ ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com