ಹೊಸ ಕುರ್ತಾ-ಪೈಜಾಮ ಕೊಡಿಸದ ಪತ್ನಿಗೆ ಜೈಲಿನಿಂದಲೇ ತ್ರಿವಳಿ ತಲಾಕ್ ನಿಡಿದ ಪತಿ ಮಹಾಶಯ!

ಜೈಲಿನಲ್ಲಿರುವ ತನ್ನ ಪತಿಗೆ ಬಕ್ರೀದ್ ಹಬ್ಬಕ್ಕಾಗಿ ಹೊಸ ಬಟ್ಟೆ ಕೊಡಿಸಲು ಸಾಧ್ಯವಾಗದ್ದಕ್ಕೆ ಮಹಿಳೆಯೊಬ್ಬಳಿಗೆ ಆಕೆಯ ಪತಿ ತ್ರಿವಳಿ ತಲಾಕ್ ನೀಡಿದ ಘಟನೆ ಉತ್ತರ ಪ್ರದೇಶದ ಅಮ್ರೊಹಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಮ್ರೋಹಾ(ಉತ್ತರ ಪ್ರದೇಶ): ಜೈಲಿನಲ್ಲಿರುವ ತನ್ನ ಪತಿಗೆ ಬಕ್ರೀದ್ ಹಬ್ಬಕ್ಕಾಗಿ ಹೊಸ ಬಟ್ಟೆ ಕೊಡಿಸಲು ಸಾಧ್ಯವಾಗದ್ದಕ್ಕೆ ಮಹಿಳೆಯೊಬ್ಬಳಿಗೆ ಆಕೆಯ ಪತಿ ತ್ರಿವಳಿ ತಲಾಕ್ ನೀಡಿದ ಘಟನೆ ಉತ್ತರ ಪ್ರದೇಶದ ಅಮ್ರೊಹಾದಲ್ಲಿ ನಡೆದಿದೆ.

"ಪ್ರಸ್ತುತ ಜೈಲಿನಲ್ಲಿರುವ ತನ್ನ ಪತಿಗೆ ಬಕ್ರೀದ್ ಸಮಯದಲ್ಲಿ  ಒಂದು ಕುರ್ತಾ-ಪೈಜಾಮವನ್ನು ಕೊಡಬೇಕಾಗಿತ್ತು. ಆದರೆ ಅದಕ್ಕಾಗಿ ಹಣದ ವ್ಯವಸ್ಥೆ ಮಾಡಲು ವಿಫಲವಾದ ಕಾರಣ ನನಗೆ ಕುರ್ತಾ ಪೈಜಾಮ ಹೊಲಿಸಲು ಸಾಧ್ಯವಾಗಿಲ್ಲ. ಇದು ನಮ್ಮ ನಡುವೆ ಜಗಳಕ್ಕೆ ಕಾರಣವಾಗಿತ್ತು.ನಾನು ಅವರನ್ನು ಭೇಟಿಯಾಗಲು ಹೋದಾಗ ಅವರು ನನಗೆ ತ್ರಿವಳಿ ತಲಾಕ್ ನಿಡಿದ್ದಾರೆ. ಈ ತಲಾಕ್ ನಿಡಿದ ವೇಳೆ ನನ್ನಿಬ್ಬರು ಕುಟುಂಬಸ್ಥರು ಸಹಿತ ನನ್ನೊಡನೆ ಇದ್ದರು." ಸಂತ್ರಸ್ಥ ಮಹಿಳೆ ಮುರ್ಷಿದಾ ಹೇಳಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪತಿ  2014 ರಿಂದ ಜೈಲಿನಲ್ಲಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಇದೀಗ ಮುರ್ಷಿದಾ ಅವರ ದೂರು ದಾಖಲಾಗಿದ್ದು ರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಪಿನ್ ತಾಡಾ ತಿಳಿಸಿದ್ದಾರೆ.

"ಕುಟುಂಬ ಸದಸ್ಯರೊಂದಿಗಿನ ಭೇಟಿಯ ಸಮಯದಲ್ಲಿ ಜೈಲಿನಲ್ಲಿರುವ ತನ್ನ ಪತಿಯಿಂದ ತ್ರಿವಳಿ ತಲಾಕ್ ಸಿಕ್ಕಿದೆಎಂದು ಮಹಿಳೆಯೊಬ್ಬರು ಇಲ್ಲಿ ಗಜ್ರೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ವ್ಯಕ್ತಿ ಮತ್ತೆ ತನ್ನ ಕುಟುಂಬ ಸದಸ್ಯರ ಮುಂದೆ ಯೇ ತಲಾಕ್ ನಿಡಿದ್ದಾನೆ. ಆತನೊಡನೆ ಆದ ಜಗಳ ಪರಿಹರಿಸಲು ತಾನು ಕುಟುಂಬ ಸದಸ್ಯರೊಡನೆ ಅಲ್ಲಿಗೆ ತೆರಳಿದ್ದೆ ಎಂದು ಮಹಿಳೆ ಹೇಳಿದ್ದಾರೆ" ಪೋಲೀಸ್ ಅಧಿಕಾರಿ ಹೇಳಿದರು.

"ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.ತ್ರಿವಳಿ ತಲಾಖ್ ಕಾನೂನು ಜಾರಿಗೆ ಬಂದ ನಂತರ ಇದು ಜಿಲ್ಲೆಯಲ್ಲಿ ಎಂಟನೇ ಪ್ರಕರಣವಾಗಿದೆ" ಎಂದು ಅವರು ಹೇಳಿದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯದ ಬಗ್ಗೆ ತಿಳಿಸಲು ಮತ್ತು ನ್ಯಾಯ ಕೋರಲು ಮಹಿಳೆ ಪತ್ರ ಬರೆಯಲು ಯೋಜಿಸುತ್ತಿದ್ದಾರೆ.

ಆಗಸ್ಟ್ 1 ರಂದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2019 ಗೆ ತಮ್ಮ ಒಪ್ಪಿಗೆಯನ್ನು ನೀಡಿದರು, ಇದು ತ್ವರಿತ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸುತ್ತದೆ ಅಲ್ಲದೆ ತಲಾಕ್ ನಿಡಿದ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com