ಮಾಧ್ಯಮಗಳು ಸತ್ಯವಲ್ಲದ, ಆಧಾರರಹಿತ ಸುದ್ದಿಗಳನ್ನು ಪ್ರಕಟಿಸುತ್ತಿವೆ; ಚಿದಂಬರಂ ಕುಟುಂಬಸ್ಥರ ಆರೋಪ 

ತಮ್ಮ ಕುಟುಂಬದ ವಿರುದ್ಧ ಮಾಧ್ಯಮಗಳು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. 
ಪಿ ಚಿದಂಬರಂ
ಪಿ ಚಿದಂಬರಂ

ಚೆನ್ನೈ: ತಮ್ಮ ಕುಟುಂಬದ ವಿರುದ್ಧ ಮಾಧ್ಯಮಗಳು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿರುವ ಪಿ ಚಿದಂಬರಂ ಕುಟುಂಬ, ಚಿದಂಬರಂ ಅವರ ಸುಮಾರು 50 ವರ್ಷಗಳ ನಿಷ್ಪಾತ ಪ್ರಾಮಾಣಿಕತೆಯ ಕೆಲಸ ಮತ್ತು ಕೊಡುಗೆಗಳನ್ನು ಆಧಾರರಹಿತ ಸುಳ್ಳು ಆಪಾದನೆಗಳ ಮೂಲಕ ಅಳಿಸಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.


ಜಗತ್ತಿನ ಯಾವುದೇ ಭಾಗದಲ್ಲಿ ತಮ್ಮ ಕುಟುಂಬ ಬಹಿರಂಗಪಡಿಸದ ಆಸ್ತಿಪಾಸ್ತಿ, ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಅದರ ಸಾಕ್ಷಿ ನೀಡಲಿ ಎಂದು ಕೂಡ ಕುಟುಂಬಸ್ಥರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.


ಈ ವಿಚಾರದಲ್ಲಿ ಮಾಧ್ಯಮಗಳು ಸಂಯಮದಿಂದ ವರ್ತಿಸುವಂತೆ ಕೂಡ ಮನವಿ ಮಾಡಿದ್ದಾರೆ. ನ್ಯಾಯಾಲಯದ ಕಾನೂನಿನಲ್ಲಿ ತಪ್ಪಿತಸ್ಥ ಎಂದು ಸಾಬೀತು ಆಗುವವರೆಗೆ ಪ್ರತಿ ವ್ಯಕ್ತಿ ಮುಗ್ಧ, ಏನೂ ತಪ್ಪು ಮಾಡದವನು ಎಂದೇ ತಿಳಿಯಲಾಗುತ್ತದೆ ಎಂದಿದ್ದಾರೆ.


ನಮ್ಮ ಕುಟುಂಬ ಹಣ ಸಂಪಾದಿಸುವ ಬಗ್ಗೆ ಹಪಾಹಪಿ ಇಟ್ಟುಕೊಂಡಿಲ್ಲ, ಯಾವುದೇ ಅಕ್ರಮ ಮಾರ್ಗಗಳ ಮೂಲಕ ಕೂಡ ಹಣ ಸಂಪಾದಿಸುವ ಅವಶ್ಯಕತೆ ನಮಗಿಲ್ಲ, ಹಲವು ದೇಶಗಳಲ್ಲಿ ನಾವು ಆಸ್ತಿ ಹೊಂದಿದ್ದೇವೆ, ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದೇವೆ, ಹಲವು ಷೇರು ಕಂಪೆನಿಗಳಿವೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇವು ದೆವ್ವ, ಭೂತದ ಕಥೆಗಳಂತೆ ಸೃಷ್ಟಿ ಮಾಡಿದ ಸುಳ್ಳು ಸುದ್ದಿಗಳು, ಒಂದು ದಿನ ದೆವ್ವ, ಭೂತಗಳಂತೆ ಈ ಸುದ್ದಿಗಳು ಸುಳ್ಳಾಗಿ ನಾಶವಾಗುತ್ತವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com