ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ

ಮಹಾ ರಾಜಕೀಯ ಹೈಡ್ರಾಮಾ ಕುರಿತು ಹೇಳಿಕೆ: ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ನಾಯಕತ್ವ ಗರಂ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕುರಿತಂತೆ ಮಾಜಿ ಕೇಂದ್ರ ಸಚಿವ, ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಬಿಜೆಪಿಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.ಬಹುಮತದ ಕೊರತೆಯ ಹೊರತಾಗಿಯೂ 40,000 ಕೋಟಿ ರೂ.ಗಳ ಕೇಂದ್ರ ನಿಧಿಯನ್ನು 'ದುರುಪಯೋಗಪಡಿಸಿಕೊಳ್ಳದಂತೆ' ರಕ್ಷಿಸಲು ಕಳೆದ ತಿಂಗಳು ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರ

ನವದೆಹಲಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕುರಿತಂತೆ ಮಾಜಿ ಕೇಂದ್ರ ಸಚಿವ, ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಬಿಜೆಪಿಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.ಬಹುಮತದ ಕೊರತೆಯ ಹೊರತಾಗಿಯೂ 40,000 ಕೋಟಿ ರೂ.ಗಳ ಕೇಂದ್ರ ನಿಧಿಯನ್ನು 'ದುರುಪಯೋಗಪಡಿಸಿಕೊಳ್ಳದಂತೆ' ರಕ್ಷಿಸಲು ಕಳೆದ ತಿಂಗಳು ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಎಂಬ ಹೆಗಡೆ ಹೇಳಿಕೆಯ ಕುರಿತು ಬಿಜೆಪಿ  ನಾಯಕತ್ವವು ಅಸಮಾಧಾನ ವ್ಯಕ್ತಪಡಿಸಿದೆ.

ಸಂಸದರ ಹೇಳಿಕೆಯ ಬಗೆಗೆ ಅಸಮಾಧಾನವಿದ್ದು ಪಕ್ಷದ ಅಸಮಾಧಾನವನ್ನು ಅವರಿಗೆ ತಿಳಿಸಲಾಗುವುದು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಸೋಮವಾರ ತಿಳಿಸಿದ್ದಾರೆ.

ಫಡ್ನವಿಸ್ ಈಗಾಗಲೇ ಹೆಗಡೆ ಅವರ ಹೇಳಿಕೆಯನ್ನು "ಸಂಪೂರ್ಣ ಅಸತ್ಯ" ಎಂದು ತಳ್ಳಿಹಾಕಿದ್ದಾರೆ, ಆ ರೀತಿಯದ್ದೇನೂ ಸಂಭವಿಸಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಬಿಜೆಪಿ ನಾಯಕತ್ವ ಫಡ್ನವಿಸ್ ಅವರನ್ನು ತುರ್ತಾಗಿ ಮುಖ್ಯಮಂತ್ರಿಯಾಗಿಸಿದೆ ಎಂದು ಹೆಗಡೆ ಹೇಳಿದ್ದರು. ಈ ಕುರಿತಂತೆ ವರ ಹೇಳಿಕೆಗಳು 'ಅನಗತ್ಯ' ಮತ್ತು ನಾಯಕತ್ವದ 'ಅಸಮಾಧಾನ'ವನ್ನು ಅವರಿಗೆ ತಿಳಿಸಲಾಗುವುದು ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳಿದ್ದಾರೆ.

ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ನಾಟಕಕ್ಕೆ ಹೊಸ ತಿರುವನ್ನು ನೀಡಲು ಹೆಗಡೆ ಪ್ರಯತ್ನಿಸಿದ್ದಾರೆ. ಕೇಂದ್ರರ ನಿಧಿಯನ್ನು ರಕ್ಷಿಸುವ ಸಲುವಾಗಿ ಫಡ್ನವೀಸ್ ಮುಖ್ಯಮಂತ್ರಿ ಪದವಿಗೇರಿದ್ದರು ಎಂದು ಹೆಗಡೆ ಹೇಳಿಕೆ ಇದೀಗ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com