ಪಿ. ಚಿದಂಬರಂ ಜಾಮೀನು ಷರತ್ತು ಉಲ್ಲಂಘಿಸಿದ್ದಾರೆ: ಪ್ರಕಾಶ್ ಜಾವಡೇಕರ್

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುವ ಮೂಲಕ ತಮ್ಮ ಜಾಮೀನಿನ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣಾ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುವ ಮೂಲಕ ತಮ್ಮ ಜಾಮೀನಿನ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣಾ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜೈಲಿನಿಂದ ಬಿಡುಗಡೆಗೊಂಡ ಮೊದಲ ದಿನವೇ ಇಂತಹ ಹೇಳಿಕೆ ನೀಡುವ ಮೂಲಕ ಚಿದಂಬರಂ ಅವರು ಸುಪ್ರೀಂಕೋರ್ಟ್ ವಿಧಿಸಿರುವ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಹಣಕಾಸು ವರ್ಷಕ್ಕೆ 7 ತಿಂಗಳಾದ ನಂತರವೂ,ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳು ಆವರ್ತಕವೆಂದೇ ಬಿಜೆಪಿ ಸರ್ಕಾರ ನಂಬುತ್ತಿದೆ. ಸರ್ಕಾರ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಖಂಡಿತವಾಗಿಯೂ ತಪ್ಪು ಮಾಡುತ್ತಿದೆ. ಸುಳುವುಗಳಿಲ್ಲದೆಯೇ ತಪ್ಪನ್ನು ಮುಂದುವರೆಸುತ್ತಿದೆ. ನೋಟು ನಿಷೇಧ, ಜಿಎಸ್'ಟಿ, ತೆರಿಗೆ ಭಯೋತ್ಪಾದನೆ, ಪ್ರಧಾನಮಂತ್ರಿ ಕಚೇರಿಯ ಕೇಂದ್ರೀಕೃತ ನಿಯಂತ್ರಣ ಮುಂತಾದ ತನ್ನ ದುರಂತ ತಪ್ಪುಗಳನ್ನು ಸಮರ್ಥಿಸಿಕೊಳ್ಳು ವಲ್ಲಿ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದ್ದು, ಇದರಿಂದ ಪದೇ ಪದೇ ತನ್ನ ತಪ್ಪನ್ನು ಮುಂದುವರೆಸುತ್ತಿದೆ. 

ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಶೇ.5ರಷ್ಟು ತಲುಪಿದರೂ ನಾವು ಅದೃಷ್ಟವಂತರೇ. ದೇಶದ ಆರ್ಥಿಕತೆ ಸಂಕಷ್ಟದಲ್ಲಿದ್ದರೂ ಪ್ರಧಾನಮಂತ್ರಿಗಳು ಮಾತ್ರ ಮೌನವಾಗಿದ್ದಾರೆ. ದೇಶದ ಆರ್ಥಿಕೆ ಸಂಕಷ್ಟದಲ್ಲಿದ್ದರೂ ಈ ವಿಚಾರವನ್ನು ತನ್ನ ಒರಟು ಹಾಗೂ ದಬಾಯಿಸುವ ಸಚಿವರ ಹೆಗಲಿಗೆ ವಹಿಸಿದ್ದಾರೆ. ದೇಶದ ಆರ್ಥಿಕತೆ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಅಸಾಮರ್ಥ್ಯವಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com