ಸಶಸ್ತ್ರ ಪಡೆ ಕಮಾಂಡರ್ ಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯೋಧ!

ಛತ್ತೀಸ್ ಘಢದ ಸಶಸ್ತ್ರಪಡೆ  (ಸಿಎಎಫ್) ಕಮಾಂಡರ್ ಓರ್ವನ ಮೇಲೆ ಆತನಾಧೀನದಲ್ಲಿದ್ದ ಇನ್ನೋರ್ವ ಯೋಧ ಗುಂಡು ಹಾರಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ. ಹಾಗೆ ಕಮಾಂಡರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಯೋಧ ಸಹ ಕಡೆಗೆ ತನಗೆ ತಾನು ಗುಂಡಿಕ್ಕಿಕೊಂಡು ಸಾವಿಗೀಡಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ರಾಂಚಿ: ಛತ್ತೀಸ್ ಘಢದ ಸಶಸ್ತ್ರಪಡೆ  (ಸಿಎಎಫ್) ಕಮಾಂಡರ್ ಓರ್ವನ ಮೇಲೆ ಆತನಾಧೀನದಲ್ಲಿದ್ದ ಇನ್ನೋರ್ವ ಯೋಧ ಗುಂಡು ಹಾರಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ. ಹಾಗೆ ಕಮಾಂಡರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಯೋಧ ಸಹ ಕಡೆಗೆ ತನಗೆ ತಾನು ಗುಂಡಿಕ್ಕಿಕೊಂಡು ಸಾವಿಗೀಡಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.

ಮೃತರನ್ನು ಕಮಾಂಡರ್ ಮೇಲಾ ರಾಮೋರ್ ಎಂದು ಗುರುತಿಸಲಾಗಿದೆ. ಇನ್ನು ಗುಂಡಿಕ್ಕಿದ ಯೋಧನನ್ನು ವಿಕ್ರಮ್ ರಾಜಬಾಧಿ ಎಂದು ಹೇಳಲಾಗಿದೆ.- ಇಬ್ಬರೂ ಚುನಾವಣಾ ಕರ್ತವ್ಯಕ್ಕಾಗಿ ರಾಜ್ಯದಲ್ಲಿ ನಿಯೋಜಿಸಲ್ಪಟ್ಟಿದ್ದರು ಎಂದು ರಾಂಚಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನೀಶ್ ಗುಪ್ತಾ ತಿಳಿಸಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ ಸೋಮವಾರ ಮುಂಜಾನೆ 6.30 ರ ಸುಮಾರಿಗೆ ಇಬ್ಬರೂ ಜಗಳದಲ್ಲಿ ತೊಡಗಿದ್ದರು. ಆ ವೇಳೆ ಯೋಧ ವಿಕ್ರಮ್ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ಕಮಾಂಡರ್ ರಾಮೋರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆ ನಂತರ ಯೋಧ ವಿಕ್ರಮ್ ತನಗೆ ತಾನು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com