ಗಡಿ ಜಿಲ್ಲಾ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು ವಿಕಲಚೇತನರ ವಿಶೇಷ ಜಾತ್ರೆ

ಜಾತ್ರೆ ಅಂದ್ರೆ ಏನುಂಟು ಏನಿಲ್ಲ, ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಜಾತ್ರೆ ಅಂದ್ರೆ ಎಲ್ಲಿಲ್ಲದ ಖುಷಿ. ಜಾತ್ರೆಗೆ ಹೋದ್ರೆ ಇಷ್ಟಪಟ್ಟ ತಿಂಡಿ ತಿನಿಸುಗಳ ತಿನ್ನುವಾಸೆ.
ಗಡಿ ಜಿಲ್ಲಾ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು ವಿಕಲಚೇತನರ ವಿಶೇಷ ಜಾತ್ರೆ
ಗಡಿ ಜಿಲ್ಲಾ ಕೇಂದ್ರದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು ವಿಕಲಚೇತನರ ವಿಶೇಷ ಜಾತ್ರೆ
Updated on

ಚಾಮರಾಜನಗರ: ಜಾತ್ರೆ ಅಂದ್ರೆ ಏನುಂಟು ಏನಿಲ್ಲ, ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಜಾತ್ರೆ ಅಂದ್ರೆ ಎಲ್ಲಿಲ್ಲದ ಖುಷಿ. ಜಾತ್ರೆಗೆ ಹೋದ್ರೆ ಇಷ್ಟಪಟ್ಟ ತಿಂಡಿ ತಿನಿಸುಗಳ ತಿನ್ನುವಾಸೆ. ಆಟದ ಸಾಮಾನುಗಳನ್ನ ಕೊಳ್ಳುವಾಸೆ. ಜಾತ್ರೆಯಲ್ಲಿರುವ ರೈಲಿನಲ್ಲಿ ಒಂದು ಸುತ್ತು ಹೊಡೆಯುವ ಆಸೆ. ಇಳಿಜಾರು ಬಂಡೆಯಲ್ಲಿ ಜಾರುವಾಸೆ. ಜಾತ್ರೆ ಅಂದ್ರೆ ಹಾಗೆ… ಆದ್ರೆ ಇಲ್ಲಿ ನಡೆದಿದ್ದು ಜಾತ್ರೆಯೇ ಆದ್ರೆ ವಿಕಲ ಚೇತನರಿಗೆ ಮಾತ್ರ. ಇಲ್ಲಿ ಎಲ್ಲವೂ ಉಚಿತವಾಗಿತ್ತು.

ಎಲ್ಲರಿಗೂ ಚಿಕ್ಕ ವಯಸ್ಸಿನಲ್ಲಿ ಜಾತ್ರೆಗೆ ಹೋಗೋದು ಅಂದ್ರೆ, ಸಂಭ್ರಮ. ಇಷ್ಟ ಬಂದ ತಿಂಡಿ ತಿನಸುಗಳನ್ನ ತಿನ್ನೋದು, ಆಟಿಕೆಗಳನ್ನ ಖರೀದಿ ಮಾಡೋದು, ವೀಲಿಂಗ್ ಚೇರ್ ನಲ್ಲಿ, ರೈಲಿನಲ್ಲಿ ಇಳಿಜಾರು ಬಂಡೆಯಲ್ಲಿ ಆಟ ಆಡೋದು, ಸಂಜೆ ಮನೆಗೆ ಬರೋವಾಗ ಆ ನೆನಪುಗಳನ್ನ ಹೊತ್ತು ವಾರ ಗಟ್ಟಲೆ ಕುಳಿತು ನೆನಪಿಸಿಕೊಳ್ಳೋದು. ಇಂತಹ ಒಂದು ಅವಕಾಶ ವಿಕಲ ಚೇತನ ಮಕ್ಕಳಿಗೆ ಸಿಕ್ಕರೆ ಅವರ ಖುಷಿಗೆ ಮಿತಿಯೇ ಇರುವುದಿಲ್ಲ.

ಗಡಿ ಜಿಲ್ಲೆ ಚಾಮರಾಜನಗರದಲ್ಲೊಂದು ಜಾತ್ರೆ ನಡೀತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ವಿಕಲ ಚೇತನ ಶ್ರೇಯೋಭಿವೃದ್ಧಿ, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಚಾಮರಾಜನಗರ ಪಟ್ಟಣದ ಪಿಡಬ್ಲ್ಯೂಡಿ ಶಾಲಾವರಣದಲ್ಲಿ ವಿಕಲ ಚೇತನ ಮಕ್ಕಳಿಗಾಗಿ ಜಾತ್ರೆ ನಡೆಯಿತು.

ಹಬ್ಬ ಹರಿದಿನಗಳಲ್ಲಿ ನಡೆಯುವ ಜಾತ್ರೆಯಂತೆ ಅಲ್ಲಿ ಎಲ್ಲವೂ ವಿಕಲ ಚೇತನರಿಗೆ ಸಿಗುವಂತೆ ಆಯೋಜನೆ ಮಾಡಲಾಗಿತ್ತು. ಇತರೆ ಮಕ್ಕಳಂತೆ ವಿಕಲ ಚೇತನ ಮಕ್ಕಳು ಸಹ ಆಡಿ ನಲಿದು ಇಷ್ಟಪಟ್ಟದ್ದನ್ನ ತಿಂದು ಖುಷಿ ಪಡುವಂತೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಎಲ್ಲ ವಯಸ್ಸಿನ ವಿಕಲ ಚೇತನರು ಇಷ್ಟಪಟ್ಟ ತಿಂಡಿ ತಿನಿಸುಗಳನ್ನ ತಿನ್ನುತ್ತಾ, ಜಾತ್ರೆ ರೈಲಿನಲ್ಲಿ ಒಂದು ಸುತ್ತ ಸುತ್ತಿ ಖುಷಿ  ಹಂಚಿಕೊಂಡರು.

ವರದಿ ಗುಳಿಪುರ ನಂದೀಶ. ಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com