ಪೌರತ್ವ (ತಿದ್ದುಪಡಿ) ಮಸೂದೆಗೆ ಮೂಗು ತೂರಿಸಿದ ಅಮೆರಿಕ ಆಯೋಗಕ್ಕೆ ಭರ್ಜರಿ ತಿರುಗೇಟು ನೀಡಿದ ಭಾರತ

ಭಾರತದ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಆಯೋಗ (ಯುಎಸ್ ಸಿಐಆರ್ ಎಫ್) ನೀಡಿರುವ ಹೇಳಿಕೆಯನ್ನು ಭಾರತ ತಿರಸ್ಕರಿಸಿ ಭರ್ಜರಿ ತಿರುಗೇಟು ನೀಡಿದೆ. 
ಪೌರತ್ವ (ತಿದ್ದುಪಡಿ) ಮಸೂದೆಗೆ ಮೂಗು ತೂರಿಸಿದ ಅಮೆರಿಕ ಆಯೋಗಕ್ಕೆ ಭರ್ಜರಿ ತಿರುಗೇಟು ನೀಡಿದ ಭಾರತ
ಪೌರತ್ವ (ತಿದ್ದುಪಡಿ) ಮಸೂದೆಗೆ ಮೂಗು ತೂರಿಸಿದ ಅಮೆರಿಕ ಆಯೋಗಕ್ಕೆ ಭರ್ಜರಿ ತಿರುಗೇಟು ನೀಡಿದ ಭಾರತ

ನವದೆಹಲಿ: ಭಾರತದ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಆಯೋಗ (ಯುಎಸ್ ಸಿಐಆರ್ ಎಫ್) ನೀಡಿರುವ ಹೇಳಿಕೆಯನ್ನು ಭಾರತ ತಿರಸ್ಕರಿಸಿ ಭರ್ಜರಿ ತಿರುಗೇಟು ನೀಡಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್, ಯುಎಸ್ ಸಿಐಆರ್ ಎಫ್ ಹೇಳಿಕೆ ಅನಗತ್ಯ ಹಾಗೂ ಅಸಮರ್ಪಕವಾಗಿದೆ ಎಂದು ತಿರುಗೇಟು ನೀಡಿದ್ದಾರೆ. 

ಪೌರತ್ವ ಮಸೂದೆಯ ಬಗ್ಗೆ ಧಾರ್ಮಿಕ ಸ್ವಾತಂತ್ರ್ಯ ಆಯೋಗ ನೀಡಿರುವ ಹೇಳಿಕೆ ಪೂರ್ವಾಗ್ರಹದಿಂದ ಕೂಡಿದೆ. ಅದರ ಬಗ್ಗೆ ಅವರಿಗೆ ತುಂಬಾ ಕಡಿಮೆ ಜ್ಞಾನ ಇದೆ. ಈ ಸಂಬಂಧ ಹೇಳಿಕೆ ನೀಡಲು ಯುಎಸ್ ಸಿಐಆರ್ ಎಫ್ ಗೆ ಯಾವುದೇ ಅಧಿಕಾರವೂ ಇಲ್ಲ, ಮಸೂದೆಯಲ್ಲಿ ಅನ್ಯದೇಶಗಳಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಉದ್ದೇಶವಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವ ಈ ರೀತಿಯ ಕ್ರಮವನ್ನು ವಾಸ್ತವವಾಗಿ ಸ್ವಾಗತಿಸಬೇಕು, ಟೀಕೆ ಮಾಡುವುದಲ್ಲ ಎಂದು ಭಾರತ ಅಮೆರಿಕಾದ ಆಯೋಗಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
   

ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಮುಖ್ಯ ನಾಯಕರ ವಿರುದ್ಧ ನಿರ್ಬಂಧ ವಿಧಿಸಬೇಕು ಎಂದು ಅಮೆರಿಕಕ್ಕೆ ಕಮಿಷನ್ ಮನವಿ ಮಾಡಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com