ಜಾಮಿಯಾ ವಿ.ವಿ ಉಪ ಕುಲಪತಿ ನಜ್ಮಾ ಅಕ್ತರ್
ಜಾಮಿಯಾ ವಿ.ವಿ ಉಪ ಕುಲಪತಿ ನಜ್ಮಾ ಅಕ್ತರ್

ನೀವು ಏಕಾಂಗಿಯಲ್ಲ, ನಿರಾಶರಾಗಿ ಧೈರ್ಯಗುಂದಬೇಡಿ: ವಿದ್ಯಾರ್ಥಿಗಳಿಗೆ ಉಪ ಕುಲಪತಿ ಭರವಸೆ 

ಯಾವುದೇ ಪೂರ್ವಾನುಮತಿಯಿಲ್ಲದೆ ಪೊಲೀಸರು ವಿಶ್ವವಿದ್ಯಾಲಯ ಕ್ಯಾಂಪಸ್ ನೊಳಗೆ ಪ್ರವೇಶಿಸುವುದು, ಗ್ರಂಥಾಲಯದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡುವುದು ಖಂಡಿತಾ ಒಪ್ಪತಕ್ಕಂತಹ ನಡವಳಿಕೆಯಲ್ಲ, ಹೀಗೆಂದು ಹೇಳಿದ್ದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪ ಕುಲಪತಿ. 

ನವದೆಹಲಿ: ಯಾವುದೇ ಪೂರ್ವಾನುಮತಿಯಿಲ್ಲದೆ ಪೊಲೀಸರು ವಿಶ್ವವಿದ್ಯಾಲಯ ಕ್ಯಾಂಪಸ್ ನೊಳಗೆ ಪ್ರವೇಶಿಸುವುದು, ಗ್ರಂಥಾಲಯದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡುವುದು ಖಂಡಿತಾ ಒಪ್ಪತಕ್ಕಂತಹ ನಡವಳಿಕೆಯಲ್ಲ, ಹೀಗೆಂದು ಹೇಳಿದ್ದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪ ಕುಲಪತಿ.


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ಚದುರಿಸಲು ಬಂದಾಗ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉಪ ಕುಲಪತಿ ನಜ್ಮಾ ಅಕ್ತರ್ ತಮ್ಮ ವಿದ್ಯಾರ್ಥಿಗಳಿಗೆ ವಿಡಿಯೊ ಸಂದೇಶ ನೀಡಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ನೀವು ಏಕಾಂಗಿಯಲ್ಲ, ಜಮಿಯಾ ಕುಟುಂಬದ ಜೊತೆಗೆ ನಾವಿದ್ದೇವೆ. ಪೊಲೀಸರು ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿಯಿಂದ ತೀವ್ರ ನೋವುಂಟಾಗಿದೆ ಎಂದರು.


ಲೈಬ್ರೆರಿಯೊಳಗಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಗಿದ್ದು ಅವರೀಗ ಸುರಕ್ಷಿತರಾಗಿದ್ದಾರೆ. ನಾನು ಈ ಘಟನೆ ವಿರುದ್ಧ ಸಾಧ್ಯವಾದಷ್ಟು ಧ್ವನಿಯೆತ್ತುತ್ತೇನೆ. ನೀವು ಇಲ್ಲಿ ಏಕಾಂಗಿಗಳಲ್ಲ, ನಿಮ್ಮ ಜೊತೆ ನಾವಿದ್ದೇವೆ, ಧೈರ್ಯಗುಂದಬೇಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. 


ಮುಂದಿನ ದಿನಗಳಲ್ಲಿ ಇನ್ನಷ್ಟು ಗಲಾಟೆಗಳಾಗಬಹುದು ಎಂದು ಹಾಸ್ಟೆಲ್ ನಿಂದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. 


ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ಸಾಯಂಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ತಡೆಯಲು ಪೊಲೀಸರು ಕ್ಯಾಂಪಸ್ ನೊಳಗೆ ಪ್ರವೇಶಿಸಿ ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದರು. ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಸುಮಾರು 100 ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು ನಂತರ ಇಂದು ನಸುಕಿನ ಜಾವ 3.30ರ ಹೊತ್ತಿಗೆ ಅವರನ್ನು ಬಿಡುಗಡೆ ಮಾಡಿದರು. 


ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) 2019 ವಿರೋಧಿಸಿ ಭಾರತದಾದ್ಯಂತ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

Related Stories

No stories found.

Advertisement

X
Kannada Prabha
www.kannadaprabha.com