ಬಿಪಿನ್ ರಾವತ್
ಬಿಪಿನ್ ರಾವತ್

ಗಡಿಯಲ್ಲಿ ಉದ್ವಿಗ್ನತೆ ಎದುರಿಸಲು ಸಜ್ಜಾಗಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ

ಸತತ ಕದನ ವಿರಾಮ ಉಲ್ಲಂಘನೆ ಮತ್ತು ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ನಿಯಂತ್ರಣ ರೇಖೆಯ ಬಳಿ (ಎಲ್‌ಒಸಿ) ಉದ್ವಿಗ್ನತೆ ಹೆಚ್ಚಾಗಬಹುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬುಧವಾರ ಎಚ್ಚರಿಸಿದ್ದಾರೆ.

ನವದೆಹಲಿ: ಸತತ ಕದನ ವಿರಾಮ ಉಲ್ಲಂಘನೆ ಮತ್ತು ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ನಿಯಂತ್ರಣ ರೇಖೆಯ ಬಳಿ (ಎಲ್‌ಒಸಿ) ಉದ್ವಿಗ್ನತೆ ಹೆಚ್ಚಾಗಬಹುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬುಧವಾರ ಎಚ್ಚರಿಸಿದ್ದಾರೆ.

ಎಲ್‌ಒಸಿಯಲ್ಲಿ ಶತ್ರುಪಡೆಗೆ ತಕ್ಕ ತಿರುಗೇಟು ನೀಡಲು ಸೈನಿಕರು ಹೆಚ್ಚು ಜಾಗ್ರತೆಯಿಂದಿರುವಂತೆ ಸೂಚಿಸಿರುವ ರಾವತ್, ಗಡಿಯಲ್ಲಿ ಯಾವುದೇ ಸವಾಲನ್ನು ಎದುರಿಸಲು ಎಸ್ಕಲೇಟರಿ ಮ್ಯಾಟ್ರಿಕ್ಸ್ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ ರಾವತ್ ಈ ಹೇಳಿಕೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com