ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು-ಕಾಶ್ಮೀರದ ಪೂಂಛ್​ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಅತ್ತ ಗಡಿಯಲ್ಲಿ ಕುತಂತ್ರಿ ಪಾಕಿಸ್ತಾನ ತನ್ನ ಉದ್ಧಟನ ಮುಂದುವರೆಸಿದ್ದು, ಕದನವಿರಾಮ ಉಲ್ಲಂಘನೆ ಮಾಡಿದೆ.

ಶ್ರೀನಗರ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಅತ್ತ ಗಡಿಯಲ್ಲಿ ಕುತಂತ್ರಿ ಪಾಕಿಸ್ತಾನ ತನ್ನ ಉದ್ಧಟನ ಮುಂದುವರೆಸಿದ್ದು, ಕದನವಿರಾಮ ಉಲ್ಲಂಘನೆ ಮಾಡಿದೆ.

ಪಾಕಿಸ್ತಾನದ ಸೇನಾ ಪಡೆ ಗುರುವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತದ ಗಡಿಭಾಗದಲ್ಲಿರುವ ಗ್ರಾಮಗಳು, ಸೇನಾ ಪೋಸ್ಟ್​ಗಳ ಮೇಲೆ ದಾಳಿ ನಡೆಸಿದೆ. ಪೂಂಛ್ ಜಿಲ್ಲೆಯ ಮನ್​ಕೋಟೆ ಸೆಕ್ಟರ್ ನಲ್ಲಿ ಇಂದು ಬೆಳಗ್ಗೆ 7.15ರ ಸುಮಾರಿಗೆ ಶೆಲ್ಲಿಂಗ್ ಮತ್ತು ಮೋರ್ಟಾರ್ ಬಾಂಬ್​ ದಾಳಿ ನಡೆದಿದೆ. ಶೆಲ್ ದಾಳಿಯಲ್ಲಿ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಕುರಿತು ಇನ್ನಷ್ಟೇ ಸೇನಾಮೂಲಗಳು ಮಾಹಿತಿ ನೀಡಬೇಕಿದೆ.

ಇನ್ನು ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ಕೂಡ ಸೂಕ್ತ ತಿರುಗೇಟು ನೀಡಿದ್ದು, ಪ್ರತಿದಾಳಿಯಲ್ಲಿ ಸೈನಿಕರು ಮಗ್ನರಾಗಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com