ಪಾಕಿಸ್ತಾನದೊಡನೆ ಲಿಂಕ್: ಬೇಹುಗಾರಿಕೆ ದಂಧೆಯಲ್ಲಿ ತೊಡಗಿದ್ದ 7 ನೌಕಾ ಸಿಬ್ಬಂದಿ ಬಂಧನ

ಪಾಕಿಸ್ತಾನ ಜತೆ ಸಂಪರ್ಕ ಹೊಂದಿದ್ದಲ್ಲದೆ ಬೇಹುಗಾರಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ  ಭಾರತೀಯ ನೌಕಾಪಡೆಯ ಏಳು ಸಿಬ್ಬಂದಿಯನ್ನು ಆಂಧ್ರ ಪೋಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಅಮರಾವತಿ: ಪಾಕಿಸ್ತಾನ ಜತೆ ಸಂಪರ್ಕ ಹೊಂದಿದ್ದಲ್ಲದೆ ಬೇಹುಗಾರಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ  ಭಾರತೀಯ ನೌಕಾಪಡೆಯ ಏಳು ಸಿಬ್ಬಂದಿಯನ್ನು ಆಂಧ್ರ ಪೋಲೀಸರು ಬಂಧಿಸಿದ್ದಾರೆ.

ಗುಪ್ತಚರ ವಿಭಾಗ ಮತ್ತು ನೌಕಾ ಗುಪ್ತಚರರ ಜೊತೆಗೂಡಿ ಆಪರೇಷನ್ ಡಾಲ್ಫಿನ್ಸ್ ನೋಸ್ ಅನ್ನು ಪ್ರಾರಂಭಿಸಿದಾಗ ಬೇಹುಗಾರಿಕೆ ದಂಧೆಯು ಬಯಲಾಗಿದೆ ಎಂದು ಪೋಲೀಸ್ ಪ್ರಕಟಣೆ ಹೇಳಿದೆ.

ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಏಳು ನೌಕಾಪಡೆಯ ಸಿಬ್ಬಂದಿ ಸೇರಿದಂತೆ ಹವಾಲಾ ಆಪರೇಟರ್ ಅನ್ನು ದೇಶದ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆ. ಇನ್ನೂ ಕೆಲವು ಶಂಕಿತರನ್ನು ಪ್ರಶ್ನಿಸಲಾಗುತ್ತಿದೆ ಎನ್ನುವುದಾಗಿ ಪ್ರಕಟಣೆ ತಿಳಿಸಿದೆ.

ಇನ್ನೂ ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿಯಬೇಕಿದೆ.ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com