ಈ ಟ್ರೆಂಡ್ ಅಂತಿಮವಲ್ಲ, ನಾವು ಗೆದ್ದು ಸರ್ಕಾರ ರಚಿಸುತ್ತೇವೆ: ಜಾರ್ಖಂಡ್ ಸಿಎಂ ರಘುವರ್ ದಾಸ್ 

ಚುನಾವಣಾ ಆಯೋಗದ ಇತ್ತೀಚಿನ ವರದಿ ಪ್ರಕಾರ ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ರಘುವರ ದಾಸ್ ಜಮ್ಷೆಡ್ ಪುರ ಪೂರ್ವ ಕ್ಷೇತ್ರದಲ್ಲಿ 1,449 ಮತಗಳ ಅಂತರದಲ್ಲಿ ಮುಂದಿದ್ದಾರೆ. ಅವರಿಗೆ ಇಲ್ಲಿಯವರೆಗೆ 8,212 ಮತಗಳು ಲಭಿಸಿವೆ.
ಜಾರ್ಖಂಡ್ ಮುಖ್ಯಮಂತ್ರಿ
ಜಾರ್ಖಂಡ್ ಮುಖ್ಯಮಂತ್ರಿ
Updated on

ರಾಂಚಿ: ಚುನಾವಣಾ ಆಯೋಗದ ಇತ್ತೀಚಿನ ವರದಿ ಪ್ರಕಾರ ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ರಘುವರ ದಾಸ್ ಜಮ್ಷೆಡ್ ಪುರ ಪೂರ್ವ ಕ್ಷೇತ್ರದಲ್ಲಿ 1,449 ಮತಗಳ ಅಂತರದಲ್ಲಿ ಮುಂದಿದ್ದಾರೆ. ಅವರಿಗೆ ಇಲ್ಲಿಯವರೆಗೆ 8,212 ಮತಗಳು ಲಭಿಸಿವೆ.


ಈ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸರ್ಯು ರಾಯ್ 6,763 ಮತಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೌರವ್ ವಲ್ಲಭ್ ಕೇವಲ 1,235 ಮತಗಳನ್ನು ಗಳಿಸಿದ್ದಾರೆ.


ಈ ಅಂಕಿಅಂಶಗಳು ಅಂತಿಮ ಫಲಿತಾಂಶವಲ್ಲ. ಇನ್ನೂ ಹೆಚ್ಚಿನ ಸುತ್ತಿನ ಮತ ಎಣಿಕೆ ಬಾಕಿಯಿದೆ. ಈಗಿನ ಫಲಿತಾಂಶದ ಟ್ರೆಂಡ್ ನೋಡಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ರಾಂಚಿಯಲ್ಲಿ ಇಂದು ಅಪರಾಹ್ನ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ರಘುವರ ದಾಸ್ ಹೇಳಿದರು.


ನಾವು ಇಂದಿನ ಚುನಾವಣಾ ಫಲಿತಾಂಶದಲ್ಲಿ ಗೆಲ್ಲುವುದಲ್ಲದೆ, ಸರ್ಕಾರವನ್ನು ಕೂಡ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com