ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶ: ಕುಶಿನಗರದಲ್ಲಿ ತೃತೀಯ ಲಿಂಗಿಗಳಿಗಾಗಿ ದೇಶದ ಮೊದಲ ವಿವಿ ಸ್ಥಾಪನೆ

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ  ತೃತೀಯ ಲಿಂಗಿಗಳಿಗಾಗಿ ದೇಶದ ಮೊದಲ ವಿಶ್ವವಿದ್ಯಾಲಯ ಆರಂಭವಾಗಲಿದೆ  ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವ್ಯಾಸಂಗ ಮಾಡಲು ಇಲ್ಲಿ ಅವಕಾಶವಿದೆ. ಅಲ್ಲದೇ ಸಂಶೋಧನೆ, ಪಿಹೆಚ್ ಡಿ ಪದವಿ ಕೂಡಾ ಮಾಡಬಹುದಾಗಿದೆ. 

ಗೋರಕ್ ಪುರ: ಉತ್ತರಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ತೃತೀಯ ಲಿಂಗಿಗಳಿಗಾಗಿ ದೇಶದ ಮೊದಲ ವಿಶ್ವವಿದ್ಯಾಲಯ ಆರಂಭವಾಗಲಿದೆ.ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವ್ಯಾಸಂಗ ಮಾಡಲು ಇಲ್ಲಿ ಅವಕಾಶವಿದೆ. ಅಲ್ಲದೇ ಸಂಶೋಧನೆ, ಪಿಹೆಚ್ ಡಿ ಪದವಿ ಕೂಡಾ ಮಾಡಬಹುದಾಗಿದೆ. 

ಕುಶಿನಗರದ ಪಾಜಿಲ್ ನಗರ ಬ್ಲಾಕ್ ನಲ್ಲಿ ಅಖಿಲ ಭಾರತೀಯ ಕಿನ್ನಾರ್ ಶಿಕ್ಷ ಸೇವಾ ಟ್ರಸ್ಟ್ ನಿಂದ ( ಅಖಿಲ ಭಾರತ ತೃತೀಯ ಲಿಂಗಿಗಳ ಶಿಕ್ಷಣ ಸೇವಾ ಟ್ರಸ್ಟ್ ) ಈ ವಿಶ್ವವಿದ್ಯಾಲಯವನ್ನು ಆರಂಭಿಸಲಿದೆ.

ತೃತೀಯ ಲಿಂಗಿಗಳು ಶಿಕ್ಷಣ ಪಡೆಯಲು ಸ್ಥಾಪನೆಯಾಗುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯ ಇದಾಗಿದ್ದು, ಬರುವ ಜನವರಿ 15ರಿಂದ ಈ ಸಮುದಾಯದ ಇಬ್ಬರು ತೃತೀಯ ಲಿಂಗಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತರಗತಿಗಳು ಆರಂಭವಾಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಕೃಷ್ಣ ಮೋಹನ್ ಮಿಶ್ರಾ ತಿಳಿಸಿದ್ದಾರೆ. 

ಈ ವಿವಿಯಲ್ಲಿ ತೃತೀಯ ಲಿಂಗಿಗಳು ಒಂದನೇ ತರಗತಿಯಿಂದ ಪಿಜಿಯವರೆಗೂ ವ್ಯಾಸಂಗ ಮಾಡಬಹುದಾಗಿದೆ. ಸಂಶೋಧನೆ ಪಿಎಚ್ ಡಿ ಕೂಡಾ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸಮಾಜದಲ್ಲಿ ಶಿಕ್ಷಣ ಪಡೆದು ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸುತ್ತಿರುವುದಕ್ಕೆ ಸಂತೋಷವಾಗುತ್ತಿರುವುದಾಗಿ ಈ ಸಮುದಾಯದ ಸದಸ್ಯರಲ್ಲಿ ಒಬ್ಬರಾದ ಗುಡ್ಡಿ ಕಿನ್ನಾರ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com