ಹಿಂಸಾಚಾರ: ಹಾನಿ ಪರಿಹಾರವಾಗಿ ಮುಸ್ಲಿಮರಿಂದ 6 ಲಕ್ಷ ಚೆಕ್ ಸ್ವೀಕರಿಸಲಾಗಿದೆ-ಯುಪಿ ಸರ್ಕಾರ

ಕಳೆದ ಶುಕ್ರವಾರ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸಂಭವಿಸಿದ ಹಿಂಸಾಚಾರದಿಂದ ಉಂಟಾದ ಸಾರ್ವಜಿಕ ಆಸ್ತಿ ಪಾಸ್ತಿ ಹಾನಿಗೆ ಪರಿಹಾರವಾಗಿ ಪಶ್ಚಿಮ ಉತ್ತರ ಪ್ರದೇಶದ ಬುಲಂದ್‌ಶಹರ್ ನ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು  6 ರೂಪಾಯಿ ಚೆಕ್ ನ್ನು ಸರ್ಕಾರಕ್ಕೆ ನೀಡಿದ್ದಾರೆ.
ಮುಸ್ಲಿಂರಿಂದ ಚೆಕ್ ಸ್ವೀಕರಿಸುತ್ತಿರುವ ಸರ್ಕಾರಿ ಅಧಿಕಾರಿಗಳು
ಮುಸ್ಲಿಂರಿಂದ ಚೆಕ್ ಸ್ವೀಕರಿಸುತ್ತಿರುವ ಸರ್ಕಾರಿ ಅಧಿಕಾರಿಗಳು

ಲಖನೌ:  ಕಳೆದ ಶುಕ್ರವಾರ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸಂಭವಿಸಿದ ಹಿಂಸಾಚಾರದಿಂದ ಉಂಟಾದ ಸಾರ್ವಜಿಕ ಆಸ್ತಿ ಪಾಸ್ತಿ ಹಾನಿಗೆ ಪರಿಹಾರವಾಗಿ ಪಶ್ಚಿಮ ಉತ್ತರ ಪ್ರದೇಶದ ಬುಲಂದ್‌ಶಹರ್ ನ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು  6 ರೂಪಾಯಿ ಚೆಕ್ ನ್ನು ಸರ್ಕಾರಕ್ಕೆ ನೀಡಿದ್ದಾರೆ.

ಮುಸ್ಲಿಂ ಸಮುದಾಯದ ಪ್ರಮುಖ ನಾಯಕರರಿಂದ ಸರ್ಕಾರದ ಅಧಿಕಾರಿಗಳು 6. 27 ಲಕ್ಷ ರೂಪಾಯಿ ಚೆಕ್ ನ್ನುಸರ್ಕಾರದ ಅಧಿಕಾರಿಗಳು ಸ್ವೀಕರಿಸುತ್ತಿರುವ ವಿಡಿಯೋ ಹಾಗೂ ಪೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

ಹೆಚ್ಚು ಹಾನಿ ಸಂಭವಿಸಿದ್ದ ಮುಜಾಫರ್ ನಗರದ ಮುಸ್ಲಿಂರು ಕೂಡಾ ಹಿಂಸಾಚಾರದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತದ ಬಳಿ ಕ್ಷಮೆ ಕೋರಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಮೂರು ಎಫ್ ಐಆರ್ ದಾಖಲಿಸಿ 22 ಜನರ ಹೆಸರನ್ನು ಉಲ್ಲೇಖಿಸಿದ್ದರು. 

ಇಡೀ ಮುಸ್ಲಿಂ ಸಮುದಾಯ ಒಟ್ಟುಗೊಡಿ ನಿಧಿ ಸಂಗ್ರಹಿಸಿ,  ಸರ್ಕಾರಕ್ಕೆ ನೀಡಿರುವುದಾಗಿ ಕೌನ್ಸಿಲರ್ ಎಂದು ಪರಿಚಯಿಸಿಕೊಳ್ಳುವ ಹಜಿ ಅಕ್ರಮ್ ಆಲಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

 ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಳೆದ ಗುರುವಾರ ಹಾಗೂ ಶನಿವಾರದ ನಡುವೆ ಸಂಭವಿಸಿದ್ದ ವ್ಯಾಪಕ ಹಿಂಸಾಚಾರದಲ್ಲಿ 21 ಮಂದಿ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com