
ಬಂಕುರಾ: ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶ್ರೀರಾಮನಿಗೆ ಹೆದರುವ ಭೂತ ಎಂದು ಬಿಜೆಪಿ ನಾಯಕಿ ರಾಜಕುಮಾರಿ ಕೆಶಾರಿಯವರು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡ ಕೆಶಾರಿಯವರು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಮಮತಾ ಯಾವುದೇ ರೀತಿಯ ವೈಭವವನ್ನು ಹೊಂದಿಲ್ಲ. ಮುಖ್ಯಮಂತ್ರಿಯಾಗುವ ವಿದ್ಯಾರ್ಹತೆ ಕೂಡ ಅವರಿಗಿಲ್ಲ. ರಾಮ ಹೆಸರು ಕೇಳಿದ ಕೂಡಲೇ ಭೂತ ಬಂದವರಂತೆ ಆಡುತ್ತಾರೆ. ರಾಮನ ಹೆಸರು ಕೇಳುತ್ತಿದ್ದಂತೆಯೇ ಕಾರಿನಿಂದ ಇಳಿಯುವ ಮಮತಾ ಜನರಿಗೆ ಸವಾಲು ಹಾಕುತ್ತಾರೆ. ಮಮತಾ ಶ್ರೀರಾಮನಿಗೆ ಹೆದರುವ ಹೆಣ್ಣು ಭೂತ ಎಂದು ತಿಳಿಸಿದ್ದಾರೆ.
Advertisement