ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಆಯವ್ಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಂಡಿಸುತ್ತಿದ್ದಾರೆ.
ಇದೇ ವೇಳೆ ಸಂಸತ್ತಿನಲ್ಲಿ ಮಾತನಾಡಿದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಇರುವಾಗ ದೇಶದ ಆರ್ಥಿಕತೆ (ಜಿಡಿಪಿ) ಶೇ.7ರ ಮಟ್ಟದಲ್ಲಿ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂದ ಟ್ವೀಟ್ ಮಾಡಿರುವ ಚಿದಂಬರಂ ಕೇಂದ್ರ ಸರ್ಕಾರ ನಿನ್ನೆ ಪ್ರಕಟಿಸಿರುವ ಜಿಡಿಪಿ ಸಂಖ್ಯೆ ಬಗ್ಗೆ ಶಂಕೆ ವ್ಯಕ್ತ ಪಡಿಸಿರುವ ಚಿದಂಬರಂ ಸರ್ಕಾರ ಜಿಡಿಪಿ ಸಂಖ್ಯೆಯನ್ನು ಪರಿಷ್ಕರಿಸುವಾಗ ನಿರುದ್ಯೋಗದ ಸಂಖ್ಯೆಯನ್ನು ಪರಿಷ್ಕರಿಸಲು ಮರೆತಿರುವಂತಿದೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿನ ನಿರುದ್ಯೋಗವು 2017-18ರಲ್ಲಿ ಕಳೆದ 45 ವರ್ಷಗಳಲ್ಲೇ ಗರಿಷ್ಠ ಎನ್ನುವಂತೆ ಶೇ.6.1ರ ಪ್ರಮಾಣದಲ್ಲಿ ಇದೆಎಂದು ವರದಿಯಾಗಿದೆ, ಇದರ ನಡುವೆಯೇ ತಾನು ದೇಶದ ಕಾರ್ಮಿಕ ಶಕ್ತಿಯ ಸಮೀಕ್ಷೆಯನ್ನು ಅಂತಿಮಗೊಳಿಸಿಲ್ಲ ಎಂದು ಕೇಂದ್ರ ಸರ್ಕಾರ ನಿನ್ನೆ ಜಿಡಿಪಿ ಸಂಖ್ಯೆಯನ್ನು ಪ್ರಕಟಿಸುವಾಗ ಹೇಳಿತ್ತು.
Modi Government revises GDP growth figures upward. What government did not realise was that unemployment figure was also revised upwards!