ಡಿಎಸ್ ಪಿ ಬಸ್ಸಿ ವರ್ಗಾವಣೆ: ಸಿಬಿಐ ಮದ್ಯಂತರ ನಿರ್ದೇಶಕ ನಾಗೇಶ್ವರ ರಾವ್ ಗೆ ಸುಪ್ರೀಂ ನೋಟೀಸ್

ಮಧ್ಯಂತರ ಸಿಬಿಐ ನಿರ್ದೇಶಕರಾದ ಎಂ.ನಾಗೇಶ್ವರ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ಜಾರಿಗೊಳಿಸಿದೆ. ತನ್ನನ್ನು ಪೋರ್ಟ್ ಬ್ಲೇರ್ ಗೆ ವರ್ಗ ಮಾಡಿರುವುದನ್ನು ಪ್ರಶ್ನಿಸಿ ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಮಧ್ಯಂತರ ಸಿಬಿಐ ನಿರ್ದೇಶಕರಾದ ಎಂ.ನಾಗೇಶ್ವರ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ಜಾರಿಗೊಳಿಸಿದೆ. ತನ್ನನ್ನು ಪೋರ್ಟ್ ಬ್ಲೇರ್ ಗೆ ವರ್ಗ ಮಾಡಿರುವುದನ್ನು ಪ್ರಶ್ನಿಸಿ ಡಿಎಸ್ ಪಿ ಎಕೆ ಬಸ್ಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಾಗೇಶ್ವರ ರಾವ್ ಅವರಿಗೆ ನೊಟೀಸ್ ಜಾರಿಗೊಳಿಸಿದೆ.
ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಉಪ ಮುಖ್ಯಸ್ಥ ರಾಕೇಶ್ ಅಸ್ತಾನಾ ಅವರ ನಡುವಿನ ಸಂಘರ್ಷದ ನಂತರ ಕೇಂದ್ರ ಸರ್ಕಾರ ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು. ಡಿಸೆಂಬರ್ ೨೪೭ರಂದು ನಾಗೇಶ್ವರ ರಾವ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಿಎಸ್ ಪಿ ಎಕೆ ಬಸ್ಸಿ ಅವರನ್ನು ಅಂಡಮಾನ್ ನಿಕೋಬಾರ್ ರಾಜಧಾನಿಗೆ ವರ್ಗಾವಣೆ ಮಾಡಲಾಗಿದೆ. 
ಜನವರಿ 11ರಂದು ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿ ಸುಪ್ರೀಂ ಕೋರ್ಟ್ ಆದೇಶದ ನಂತರ ಮತ್ತೆ ಸಿಬಿಐ ನಿರ್ದೇಆಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಅಗ್ನಿಶಾಮಕ ಡಿಜಿಯನ್ನಾಗಿ ವರ್ಗಾಯಿಸಿತ್ತು. ಅದೇ ರೀತಿ ಬಸ್ಸಿ ಅವರನ್ನು ಸಹ ಪುನಃಅ ಪೋರ್ಟ್ ಬ್ಲೇರ್ ಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ ನಾಗೇಶ್ವರ ರಾವ್ ಅವರನ್ನು ಮಧ್ಯಂತರ ಸಿಬಿಐ ನಿರ್ದೇಶಕ ಸ್ಥಾನಕ್ಕೆ ತರಲಾಗಿದೆ.
ಈ ವರ್ಗಾವಣೆಯನ್ನು ಪ್ರಶ್ನಿಸಿ ಬಸ್ಸಿ ಜನವರಿ 21ರ<ದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com