ಬಂಗಾಳವನ್ನೇ ನಾಶ ಮಾಡಲು ಬಿಜೆಪಿ ಸಜ್ಜು: ಮಮತಾ ಬ್ಯಾನರ್ಜಿಆರೋಪ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾ ಪೋಲಿಸ್ ಕಮಿಷನರ್ ನಿವಾಸದ ಹೊರಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು "ಬಿಜೆಪಿ....
ಬಂಗಾಳವನ್ನೇ ನಾಶ ಮಾಡಲು ಬಿಜೆಪಿ ಸಜ್ಜು: ಮಮತಾ ಬ್ಯಾನರ್ಜಿಆರೋಪ
ಬಂಗಾಳವನ್ನೇ ನಾಶ ಮಾಡಲು ಬಿಜೆಪಿ ಸಜ್ಜು: ಮಮತಾ ಬ್ಯಾನರ್ಜಿಆರೋಪ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾ ಪೋಲಿಸ್ ಕಮಿಷನರ್ ನಿವಾಸದ ಹೊರಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು "ಬಿಜೆಪಿ (ಭಾರತೀಯ ಜನತಾ ಪಕ್ಷ) ಬಂಗಾಳವನ್ನು ಹಾಳು ಮಾಡಲು ಹೊರಟಿದೆ. ನಾನು ಬ್ರಿಗೇಡ್ ರ್ಯಾಲಿಗೆ ಅವಕಾಶ ನೀಡಿಲ್ಲ ಎಂಬ ಏಕೈಕ ಕಾರಣಕ್ಕೆ ಅವರು ಬಂಗಾಳವನ್ನೇ ನಾಶ ಮಾಡಲು ಹೊರಟಿದ್ದಾರೆ." ಎಂದರು.
ಪ್ರಧಾನಿ ಮೋದಿಯವರ ನಿನ್ನೆಯ ಭಾಷಣವನ್ನು ನೀವೇಲ್ಲಾ ಕೇಳಿದ್ದೀರಿ. ಅದರಲ್ಲಿ ಅವರು ಹಾಕಿರುವ ಬೆದರಿಕೆಗಳ ಕುರಿತೂ ನಿಮಗೆ ಅರಿವಿದೆ. ಪ್ರಧಾನಿ ಆಡಿರುವ ಭಾಷೆಯ ಕುರಿತಂತೆ ನಾನೇನೂ ಹೇಳುವ ಅಗತ್ಯವಿಲ್ಲ ಎಂದ ಟಿಎಂಸಿ ನಾಯಕಿ ಬಿಜೆಪಿ ಇದಾಗಲೇ ತನ್ನ ಎಕ್ಸ್ಪೈರಿ ದಿನಾಂಕದ ಆಚೆಗೆ ಹೋಗಿದೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮೋದಿ ಅವರ ಆದೇಶದ ಅನುಸಾರ ಕಾರ್ಯನಿರ್ವಹಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಕೇಂದ್ರೀಯ ತನಿಖಾ ದಳವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ  ಅವರು ಹೇಳಿದರು.
ನಾವು ಪೋಲೀಸ್ ಬಲಕ್ಕೆ ರಕ್ಷಣೆ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿ. ನೋಟೀಸ್ ನೀಡದೆ ನೀವು ಕೊಲ್ಕತ್ತಾ ಪೊಲೀಸ್ ಆಯುಕ್ತರ ಮನೆಗೆ ಬರುತ್ತಿದ್ದೀರಿ. ನಾವು ಸಿಬೈಐ ನವರನ್ನು ಬಂಧಿಸಬಹುದು, ಆದರೆ ಇದಿಘ ಬಿಟ್ಟಿದ್ದೇವೆ.
ರಾಜೀವ್ ಕುಮಾರ್ (ಕೊಲ್ಕತ್ತಾ ಪೋಲಿಸ್ ಕಮೀಷನರ್) ಅವರು ವಿಶ್ವದಲ್ಲೇ ಅತ್ಯುತ್ತಮ ಅಧಿಕಾರಿ ಎಂದು ನಾನು ಭಾವಿಸುತ್ತೇನೆ. ನಾನು ಸಿಬಿಐ ಅಧಿಕಾರಿಗಳ ಬಗ್ಗೆ ಗೌರವ ಹೊಂದಿದ್ದೇನೆ. ಆದರೆ ಇಂದು ನಾನು ಬಹಳ ದುಃಖಿತಳಾಗಿದ್ದೇನೆ.ಒದು ಒಕ್ಕೂಟ ವ್ಯವಸ್ಥೆಯ ನಾಶಕ್ಕೆ ಕಾರಣವಾಗಲಿದೆ" ,ಮಮತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com