ಗಿನ್ನಿಸ್ ದಾಖಲೆ ಬರೆದಿದ್ದ ಏಷ್ಯಾದ ಅತ್ಯಂತ ಹಿರಿಯ ಆನೆ 'ದಾಕ್ಷಾಯಿಣಿ 'ಇನ್ನಿಲ್ಲ!

ಏಷ್ಯಾ ಖಂಡದ ಅತ್ಯಂತ ಹಿರಿಯ ಆನೆ ಎಂದು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹೆಸರಾಗಿದ್ದ ಆನೆ "ದಾಕ್ಷಾಯಿಣಿ" 88ನೇ ವಯಸ್ಸಿನಲ್ಲಿ ಮೃತಪಟ್ಟಿದೆ.
ದಾಕ್ಷಾಯಿಣಿ
ದಾಕ್ಷಾಯಿಣಿ
Updated on
ತಿರುವನಂತಪುರಂ: ಏಷ್ಯಾ ಖಂಡದ ಅತ್ಯಂತ ಹಿರಿಯ ಆನೆ ಎಂದು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹೆಸರಾಗಿದ್ದ ಆನೆ "ದಾಕ್ಷಾಯಿಣಿ" 88ನೇ ವಯಸ್ಸಿನಲ್ಲಿ ಮೃತಪಟ್ಟಿದೆ.
ಕೇರಳದ ಪಪ್ಪನಮ್ ಕೋಡೆ ಕೇಂದ್ರದಲ್ಲಿದ್ದ ಆನೆ ದಾಕ್ಷಾಯಿಣಿ 2016ರಲ್ಲಿ ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಸೇರಿತ್ತು. ವಯೋಸಹಜ ಅನಾರೋಗ್ಯದ ಕಾರಣ ಆನೆ ಬುಧವಾರ ಕೊನೆಯುಸಿರೆಳೆದಿದೆ.
ದಾಕ್ಷಾಯಿಣಿಗೆ ಅಜ್ಜಿ’ ಎಂಬ ಬಿರುದು ಕೊಡಲಾಗಿದ್ದಷ್ಟೇ ಅಲ್ಲದೆ ಅಂಚೆ ಇಲಾಖೆ ಈ ಆನೆಯ ಚಿತ್ರವಿರುವ ಪೋಸ್ಟಲ್ ಸ್ಟ್ಯಾಂ ಪ್ ಕೂಡ ಹೊರಡಿಸಿತ್ತು.
ತಿರುವನಂತಪುರಂ ನ ಪ್ರಖ್ಯಾತ ಅನಂತಪದ್ಮನಾಭ ದೇವಾಲಯದ  ಪ್ರಸಿದ್ದ  ‘ಅರಟ್ಟು’ ಮೆರವಣಿಗೆಯಲ್ಲಿ ದಾಕ್ಷಾಯಿಣಿ ಭಾಗವಹಿಸುತ್ತಿತ್ತು.ಆನೆಯನ್ನು ನೋಡಿಕೊಳ್ಳುತ್ತಿದ್ದ  ಚೆಂಗಲೂರ್ ಮಹಾದೇವ್ ದೇವಸ್ಥಾನದ ಅಧಿಕಾರಿಗಳು ದಾಕ್ಷ್ಯಾಯಿಣಿ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಆನೆಗಳು ಸಾಮಾನ್ಯವಾಗಿ ಮನುಷ್ಯರಷ್ಟೇ ಆಯಸ್ಸನ್ನು ಹೊಂದಿರುತ್ತವೆ. ಕೆಲವು ಗಂಡಾನೆಗಳು 120 ವರ್ಷ ಬದುಕಿದ್ದೂ ಉಂಟು. ಆದರೆ ಸಾಕಿದ ಆನೆಯೊಂದು ಇಷ್ಟು ವರ್ಷ ಬಾಳಿದುದು ಇದೇ ಪ್ರಥಮ ದಾಖಲೆ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com