ಸೂಪರ್ ಸ್ನೈಪರ್ ರೈಫಲ್ ಬೆನ್ನಲ್ಲೇ ಸೇನೆ ಬತ್ತಳಿಕೆಗೆ 72,400 ಅಸ್ಸಾಲ್ಟ್ ರೈಫಲ್ ಗಳು!

ಈ ಹಿಂದೆ ಪಾಕಿಸ್ತಾನ ಸೈನಿಕರು ಮತ್ತು ಪಾಕ್ ಮೂಲಗ ಉಗ್ರರ ಹುಟ್ಟಡಗಿಸಲು ಭಾರತ ಸರ್ಕಾರ ಸೂಪರ್ ಸ್ನೈಪರ್ ಗಳ ಖರೀದಿಗೆ ಸಹಿ ಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಗಡಿಯಲ್ಲಿರುವ ಸೈನಿಕರಿಗೆ ಸುಮಾರು 72,400 ಅತ್ಯಾಧುನಿಕ ಅಸ್ಸಾಲ್ಟ್ ರೈಫಲ್ ಗಳು ಕೈ ಸೇರಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಈ ಹಿಂದೆ ಪಾಕಿಸ್ತಾನ ಸೈನಿಕರು ಮತ್ತು ಪಾಕ್ ಮೂಲಗ ಉಗ್ರರ ಹುಟ್ಟಡಗಿಸಲು ಭಾರತ ಸರ್ಕಾರ ಸೂಪರ್ ಸ್ನೈಪರ್ ಗಳ ಖರೀದಿಗೆ ಸಹಿ ಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಗಡಿಯಲ್ಲಿರುವ ಸೈನಿಕರಿಗೆ ಸುಮಾರು 72,400 ಅತ್ಯಾಧುನಿಕ ಅಸ್ಸಾಲ್ಟ್ ರೈಫಲ್ ಗಳು ಕೈ ಸೇರಲಿವೆ.
ಹೌದು.. ಭಾರತೀಯ ಸೇನೆಗಾಗಿ 72,400 ಬಂದೂಕುಗಳ (ಅಸಾಲ್ಟ್‌ ರೈಫಲ್ಸ್‌) ಖರೀದಿಗಾಗಿ ಕೇಂದ್ರ ಸರ್ಕಾರ, ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮಂಗಳವಾರ ಅಮೆರಿಕ ಮೂಲದ ರಕ್ಷಣಾ ಪರಿಕರ ಉತ್ಬಾದನಾ ಸಂಸ್ಥೆ ಸಿಗ್ ಸಾವರ್ ನೊಂದಿಗೆ ಸಹಿ ಹಾಕಿದೆ. 
ಒಪ್ಪಂದದ ಅನ್ವಯ ಸಿಗ್ ಸಾವರ್ ಸಂಸ್ಛೆ ಭಾರತಕ್ಕೆ 72,400 ಅಸ್ಸಾಲ್ಟ್ ರೈಫಲ್ ಗಳನ್ನು ಪೂರೈಕೆ ಮಾಡಲಿದೆ. ಒಂದು ವರ್ಷಗಳ ಅವಧಿಯೊಳಗೆ ಸಿಗ್ ಸಾವರ್ ಸಂಸ್ಥೆ ಭಾರತಕ್ಕೆ 7.62 ಎಂಎಂ ಸಾಮರ್ಥ್ಯದ 72,400 ಅಸ್ಸಾಲ್ಟ್ ರೈಫಲ್ ಗಳನ್ನು ಪೂರೈಕೆ ಮಾಡಲಿದೆ. ಪ್ರಸ್ತುತ ಭಾರತೀಯ ಸೈನಿಕರು 5.56x45 ಎಂಎಂ ಇನ್ಸಾಸ್ ರೈಫಲ್ ಗಳನ್ನು ಬಳಕೆ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಸಿಗ್ ಸಾವರ್ ಸಂಸ್ಥೆ 7.62 ಎಂಎಂ ರೈಫಲ್ ಗಳನ್ನು ಬಳಕೆ ಮಾಡಲಿದೆ. ಇನ್ನು ಈ ಸಿಗ್ ಸಾವರ್ ಸಂಸ್ಛೆಯ 7.62 ಎಂಎಂ ರೈಫಲ್ ಗಳು ಈ ಹಿಂದಿನ 5.56x45 ಎಂಎಂ ಇನ್ಸಾಸ್ ರೈಫಲ್ ಗಳಿಗಿಂತ ಪ್ರಬಲವಾಗಿದ್ದು, ಅತೀ ಹೆಚ್ಚು ದೂರದಲ್ಲಿರುವ ಶೃತ್ರುಗಳನ್ನು ಹೊಡೆದುರಿಳಿಸಬಲ್ಲದು. 
ಸ್ವತಃ ಅಮೆರಿಕ ಅಲ್ಲದೇ, ಯುರೋಪ್ ನ ಅನೇಕ ರಾಷ್ಟ್ರಗಳ ಭದ್ರತಾ ಪಡೆಗಳು ಈ ಬಂದೂಕುಗಳನ್ನು ಬಳಕೆ ಮಾಡುತ್ತಿವೆ.
ಮುಂದಿನ ಒಂದು ವರ್ಷದ ಅವಧಿಯೊಳಗೆ ಪಾಕಿಸ್ತಾನ ಗಡಿಯೂ ಸೇರಿದಂತೆ ಚೀನಾದೊಂದಿಗೆ ಭಾರತ ಹಂಚಿಕೊಂಡಿರುವ 3600 ಕಿ.ಮೀ ಗಡಿ ಪ್ರದೇಶದಲ್ಲಿ ಪಹರೆ ಕಾಯುವ ಯೋಧರಿಗೆ ನಿಯಮಿತವಾಗಿ ಈ ರೈಫಲ್ ಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ತ್ವರಿತ ಗತಿ ಖರೀದಿ ಪ್ರಕ್ರಿಯೆ’ ಯಡಿ ರೂ 700 ಕೋಟಿ ವೆಚ್ಚದಲ್ಲಿ ಈ ಬಂದೂಕುಗಳನ್ನು ಖರೀದಿ ಮಾಡಲಾಗುತ್ತಿದೆ. 
ಒಂದು ವರ್ಷದ ಒಳಗಾಗಿ ಕಂಪನಿ ಈ ಬಂದೂಕುಗಳನ್ನು ಪೂರೈಕೆ ಮಾಡಲಿದೆ. ಸದ್ಯ, ಸೇನಾಪಡೆಗಳು ಐಎನ್‌ಎಸ್‌ಎಎಸ್‌ ಬಂದೂಕುಗಳನ್ನು ಬಳಸುತ್ತಿವೆ. ಈಗಿನ ಅಗತ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗಡಿಭಾಗದಲ್ಲಿನ ಪರಿಸ್ಥಿತಿಯಲ್ಲಿ ಸುಲಭ ಬಳಕೆ ಹಾಗೂ ನಿರ್ವಹಣೆ ಸಾಧ್ಯವಿರುವ ‘ಸಿಗ್‌ ಸಾವರ್’ ಕಂಪನಿ ತಯಾರಿಸುವ ಬಂದೂಕುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
2017ರಿಂದಲೇ ಆರಂಭವಾಗಿತ್ತು ಸೇನಾ ಅಗತ್ಯಗಳ ಪೂರೈಕೆ
ಇನ್ನು 2017ರಿಂದಲೇ ಕೇಂದ್ರ ಸರ್ಕಾರ ಸೇನೆಯ ಅಗತ್ಯತೆಗಳನ್ನು ಪೂರೈಕೆ ಮಾಡಲು ಆರಂಭಿಸಿದ್ದು, 2017ರ ಅಕ್ಟೋಬರ್ ನಲ್ಲಿ ಸರ್ಕಾರ ಸುಮಾರು 7 ಲಕ್ಷ ಅಸ್ಸಾಲ್ಟ್ ರೈಫಲ್ ಗಳು, 44 ಸಾವಿರ ಲೈಟ್ ಮಷಿನ್ ಗನ್ ಗಳು, 44 600 ಕಾರ್ಬೈನ್ ಗಳನ್ನು ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. 

ಅಲ್ಲದೆ ಕೇಂದ್ರ ಬಜೆಟ್ ಮಂಡನೆ ಬಳಿಕ ರಕ್ಷಣಾ ಸಚಿವಾಲಯ ಸುಮಾರು 700 ಕೋಟಿ ರಕ್ಷಣಾ ಪರಿಕರಗಳ ಖರೀದಿಗೆ ಅನುಮೋದನೆ ನೀಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com