ಸರ್ಕಾರ ಹಾಗೂ ಸೇನೆಯ ಜೊತೆ ನಾವಿರುತ್ತೇವೆ: ರಾಹುಲ್ ಗಾಂಧಿ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಪ್ರಕರಣ ಸಂಬಂಧ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತಾವು ಬದ್ಧರಾಗಿದ್ದು, ಸರ್ಕಾರದ ಬೆಂಬಲಕ್ಕೆ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಪ್ರಕರಣ ಸಂಬಂಧ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತಾವು ಬದ್ಧರಾಗಿದ್ದು, ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಯೋಧರಿದ್ದ ವಾಹನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಸುಮಾರು 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ದೇಶ ವಿಭಜನೆಯಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಸರ್ಕಾರದ ಜೊತೆ ಹಾಗೂ ದೇಶದ ಜೊತೆ ಕಾಂಗ್ರೆಸ್ ಮತ್ತು ಇಡೀ ವಿರೋಧ ಪಕ್ಷ ಇರುತ್ತದೆ ಎಂದು ತಿಳಿಸಿದ್ದಾರೆ.
ಸೇನೆಯ ವಿರುದ್ಧ ನಡೆದಿರುವ ಹಿಂಸಚಾರ ಅಸಹ್ಯ ಹುಟ್ಟಿಸುತ್ತಿದೆ. ಯಾವುದೇ ಶಕ್ತಿ ದೇಶ ವಿಭಜನೆ ಮಾಡಲು ನಾವು ಬಿಡುವುದಿಲ್ಲ, ಇದು ಸಂತಾಪ  ಸೂಚಿಸುವ ಸಮಯ ಎಂದು ಹೇಳಿದ್ದಾರೆ.

ಇನ್ನೂ ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಇಂದು ಶೋಕಾರಚರಣೆ ದಿನವಾಗಿದೆ, ನಮ್ಮ ದೇಶ 40 ಯೋಧರನ್ನು ಕಳೆದುಕೊಂಡಿದೆ. ಭಯೋತ್ಪಾದನೆ ಜೊತೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com