ದೆಹಲಿಯಿಂದ ಇಂದು ಮೊದಲ ಪ್ರಯಾಣಿಕ ಸಂಚಾರ ಆರಂಭಿಸಿದ ವಂದೇ ಭಾರತ್ ಎಕ್ಸ್ ಪ್ರೆಸ್

ಭಾರತದ ಮೊದಲ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ತನ್ನ ಮೊದಲ ಸಂಚಾರವನ್ನು ...
ವಂದೇ ಭಾರತ್ ಎಕ್ಸ್ ಪ್ರೆಸ್
ವಂದೇ ಭಾರತ್ ಎಕ್ಸ್ ಪ್ರೆಸ್
ನವದೆಹಲಿ: ಭಾರತದ ಮೊದಲ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ತನ್ನ ಮೊದಲ ಸಂಚಾರವನ್ನು ಭಾನುವಾರ ಆರಂಭಿಸಿದೆ. ನಿನ್ನೆ ವಾರಣಾಸಿಯಿಂದ ದೆಹಲಿಗೆ ಬರುತ್ತಿದ್ದ ವೇಳೆ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು.
ಇಂದು ಬೆಳಗ್ಗೆ ದೆಹಲಿಯಿಂದ ವಾರಣಾಸಿ ಕಡೆ ಪ್ರಯಾಣ ಬೆಳೆಸಿದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮುಂದಿನ ಎರಡು ವಾರಗಳವರೆಗೆ ಟಿಕೆಟ್ ಪ್ರಯಾಣಿಕರು ಕಾಯ್ದಿರಿಸಿದ್ದಾರೆ. 
ನಿನ್ನೆ ತಾಂತ್ರಿಕ ದೋಷ ಕಂಡುಬಂದ ನಂತರ ಅದನ್ನು ಎಂಜಿನಿಯರ್ ಗಳು ಪರೀಕ್ಷಿಸಿ ಬಿಟ್ಟಿದ್ದರು. ಆರಂಭದಲ್ಲಿ ಈ ರೈಲಿಗೆ ಟ್ರೈನ್ 18 ಎಂದು ಹೆಸರಿಡಲಾಗಿತ್ತು. 
ಉದ್ಘಾಟನೆಯಾದ ಮರುದಿನವೇ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಕಾಲೆಳೆದಿದ್ದರು. ಮೇಕ್ ಇನ್ ಇಂಡಿಯಾ ವಿಫಲ ಎಂದು ಹೇಳಿದ್ದರು.
 ಅದಕ್ಕೆ ಟ್ವೀಟ್ ನಲ್ಲಿ ಉತ್ತರಿಸಿರುವ ಗೋಯಲ್, ಭಾರತದ ಎಂಜಿನಿಯರ್, ತಂತ್ರಜ್ಞರು ಮತ್ತು ಕಾರ್ಮಿಕರನ್ನು ನೀವು ಕಡೆಗಣಿಸಿದ್ದೀರಿ. ನಿಮ್ಮ ಮನೋಧರ್ಮವನ್ನು ಬದಲಿಸಿಕೊಳ್ಳಿ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com