ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರು, 'ಘಟನೆಯ ತನಿಖೆ ಪ್ರಗತಿಯಲ್ಲಿದೆ. ದೇಶದಲ್ಲಿ ಮುಂಬೈ ದಾಳಿಯಿಂದ ಇಲ್ಲಿಯವರೆಗೆ ಉಗ್ರರು ನಡೆಸಿರುವ ಎಲ್ಲಾ ದಾಳಿಗಳ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ನೀಡಿದರೂ ಪಾಕಿಸ್ತಾನ ಏನು ಕ್ರಮ ಕೈಗೊಂಡಿದೆ,' ಎಂದು ಪ್ರಶ್ನಿಸಿದರು.