ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು!

ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಮರುಕಳಿಸದು ಎಂದು ಸಿಎಲ್ಎಸ್ಎ ಸಮೀಕ್ಷೆ ಹೇಳಿದೆ.
ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು!
ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಮರುಕಳಿಸದು ಎಂದು ಸಿಎಲ್ಎಸ್ಎ ಸಮೀಕ್ಷೆ ಹೇಳಿದೆ. 
ಮಾರುಕಟ್ಟೆ ಸಂಶೋಧನೆ ಹಾಗೂ ದಳ್ಳಾಳಿ ಸಂಸ್ಥೆ ಸಿಎಲ್ಎಸ್ಎ ಉತ್ತರ ಪ್ರದೇಶದಲ್ಲಿ ಎರಡು ವಾರ ನಿರಂತರ ಸಮೀಕ್ಷೆ ನಡೆಸಿದ್ದು, ಬಿಜೆಪಿ ಉತ್ತರ ಪ್ರದೇಶದ ಅರ್ಧದಷ್ಟು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯ ಎಂದು ಸಮೀಕ್ಷೆ ವರದಿ ಹೇಳಿದೆ. 
ಇದೇ ವೇಳೆ ಪುಲ್ವಾಮ ದಾಳಿಯೂ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಸಮೀಕ್ಷೆ ಹೇಳಿದೆ. "ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ, ಆದರೆ 2014 ರ ಚುನಾವಣೆ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಸಾಧ್ಯ" ಎಂದು ಸಮೀಕ್ಷೆ ಹೇಳಿದೆ. 
ಬಿಜೆಪಿಗೆ 80 ಲೋಕಸಭಾ ಕ್ಷೇತ್ರಗಳಲ್ಲಿ 40-45 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ಮೋದಿ ಜನಪ್ರಿಯತೆ ಒಂದಷ್ಟು ಮತಗಳಾಗಿ ಪರಿವರ್ತನೆಯಾಗಬಹುದು. ಈ ನಡುವೆ ಪ್ರಿಯಾಂಕ ಗಾಂಧಿ ಅವರ ರಾಜಕೀಯ ಎಂಟ್ರಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾವ ಮೂಡಿಸಿದ್ದು, ಎಸ್-ಪಿ-ಬಿಎಸ್ ಪಿ ಮೈತ್ರಿಗೆ ಒಂದಷ್ಟು ಹೊಡೆತ ನೀಡಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಗೆ ಸಾಧ್ಯವಿದೆ ಎಂದು ಸಿಎಲ್ಎಸ್ಎ ವರದಿ ಹೇಳಿದೆ.
ಗೋ ರಕ್ಷಣೆ ಹೆಸರಿನಲ್ಲಿ ನಡೆದ ಘಟನೆಗಳು ರೈತರಲ್ಲಿ ಬೇಸರ ಮೂಡಿಸಿದ್ದು ಇದು ಆಡಳಿತಾರೂಢ ಪಕ್ಷದ ವಿರುದ್ಧ ಮತಗಳು ಚಲಾವಣೆಯಾಗುವುದಕ್ಕೆ ಸಾಧ್ಯವಿರುವ ಪ್ರಮುಖ ಅಂಶವಾಗಬಹುದು. ಗೋರಕ್ಷಣೆ ಹೆಸರಿನಲ್ಲಿ ನಡೆದಿರುವ ಅತಿರೇಕಗಳಿಂದ ಗೋವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ದನಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಕೃಷಿ ವಲಯದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂಬುದು ಕೆಲವರ ಬೇಸರಕ್ಕೆ ಕಾರಣ ಎಂದು ಸಿಎಲ್ಎಸ್ಎ ವರದಿಯಲ್ಲಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com