ಮಾ.1 ರಿಂದ ಮತ್ತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಶನ

ದೆಹಲಿಗೆ ಪೂರ್ಣ ಪ್ರಮಾಣ ರಾಜ್ಯದ ಸ್ಥಾನಮಾನ ನೀಡುವುದಕ್ಕೆ ಆಗ್ರಹಿಸುತ್ತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತೆ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿರಶನ ಪ್ರಾರಂಭಿಸಲಿದ್ದಾರೆ.
ಮಾ.1 ರಿಂದ ಮತ್ತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಶನ
ಮಾ.1 ರಿಂದ ಮತ್ತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಶನ
ನವದೆಹಲಿ: ದೆಹಲಿಗೆ ಪೂರ್ಣ ಪ್ರಮಾಣ ರಾಜ್ಯದ ಸ್ಥಾನಮಾನ ನೀಡುವುದಕ್ಕೆ ಆಗ್ರಹಿಸುತ್ತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತೆ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿರಶನ ಪ್ರಾರಂಭಿಸಲಿದ್ದಾರೆ. 
ಮಾ.1 ರಂದು ದೆಹಲಿಯ ವಿಧಾನಸಭೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಸಿಎಂ ಕೇಜ್ರಿವಾಲ್, ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ದೊರಕಿಸಿಕೊಡುವವರೆಗೂ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಇಡೀ ದೆಹಲಿಗೆ ಈಗ ಚಳುವಳಿಯ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ ಡಿಎ ದೆಹಲಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟುಮಾಡುತ್ತಿದೆ. ಕೇಂದ್ರ ಸರ್ಕಾರ ದೆಹಲಿಗೆ ಸಂಬಂಧಿಸಿದ ಯೋಜನೆಗಳ ಕಡತಗಳನ್ನು ಕ್ಲಿಯರ್ ಮಾಡುತ್ತಿಲ್ಲ. ಯಾವುದೇ ಯೋಜನೆಗಳು ಪೂರ್ಣಗೊಳ್ಳುವುದಕ್ಕೆ ಮಹಾರಾಷ್ಟ್ರ, ಪಂಜಾಬ್, ಹರ್ಯಾಣ, ರಾಜಸ್ಥಾನದ ಸರ್ಕಾರಗಳು ಕೇಂದ್ರದ ಅನುಮೋದನೆಗೆ ಕಾಯಬೇಕಿಲ್ಲ, ಆದರೆ ದೆಹಲಿಯ ಜನತೆ ಆಯ್ಕೆ ಮಾಡಿರುವ ಸರ್ಕಾರಕ್ಕೆ ಬೇರೆ ರಾಜ್ಯ ಸರ್ಕಾರಗಳಿಗೆ ಇರುವಷ್ಟು ಅಧಿಕಾರವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com