ಭಾರತದ 8 ಜೆಟ್ ಗಳ ಪರಾಕ್ರಮ ನೋಡಿ, ಪಾಕ್ ನ 24 ಯುದ್ಧ ವಿಮಾನಗಳು ಪರಾರಿ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆಯ ಪರಾಕ್ರಮಕ್ಕೆ ಪ್ರತಿಯಾಗಿ ದಾಳಿ ಮಾಡಲು ಬಂದಿದ್ದ ಪಾಕಿಸ್ತಾನದ 24 ಜೆಟ್ ಯುದ್ಧ ವಿಮಾನಗಳನ್ನು ಭಾರತದ ಕೇವಲ 8 ಯುದ್ಧ ವಿಮಾನಗಳು ಅಟ್ಟಾಡಿಸಿ ಹಿಂದಕ್ಕೆ ಅಟ್ಟಿವೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆಯ ಪರಾಕ್ರಮಕ್ಕೆ ಪ್ರತಿಯಾಗಿ ದಾಳಿ ಮಾಡಲು ಬಂದಿದ್ದ ಪಾಕಿಸ್ತಾನದ 24 ಜೆಟ್ ಯುದ್ಧ ವಿಮಾನಗಳನ್ನು ಭಾರತದ ಕೇವಲ 8 ಯುದ್ಧ ವಿಮಾನಗಳು ಅಟ್ಟಾಡಿಸಿ ಹಿಂದಕ್ಕೆ ಅಟ್ಟಿವೆ..
ಹೌದು.. ಈ ಬಗ್ಗೆ ವಾಯು ಸೇನಾ ಮೂಲಗಳು ಮಾಹಿತಿ ನೀಡಿವೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತೀಯ ಸೇನಾ ಪೋಸ್ಟ್ ಗಳ ಮೇಲೆ ದಾಳಿ ಮಾಡಲೆಂದೇ ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿ ಆಗಮಿಸುತ್ತಿದ್ದ ಪಾಕಿಸ್ತಾನದ 24 ಎಂಟು ಎಫ್‌–16 ಯುದ್ಧ ವಿಮಾನ, ನಾಲ್ಕು ಮಿರಾಜ್‌–3 ವಿಮಾನ ಹಾಗೂ ಚೀನಾ ನಿರ್ಮಿತ ಜೆಎಫ್‌–17 ’ಥಂಡರ್‌’ ನಾಲ್ಕು ಫೈಟರ್‌ ಜೆಟ್ ಯುದ್ಧ ವಿಮಾನಗಳನ್ನು ಭಾರತದ ಕೇವಲ 8 ಜೆಟ್ ಯುದ್ಧ ವಿಮಾನಗಳು ಅಟ್ಟಾಡಿಸಿ ವಾಯುಗಡಿಯಿಂದ ಹೊರಗೆ ಹಾಕಿವೆ.
ಭಾರತದ ನಾಲ್ಕು ಸುಖೋಯ್‌ 30ಎಸ್‌, ಎರಡು ಮಿರಾಜ್‌ 2000ಎಸ್‌ ಹಾಗೂ ಎರಡು ಮಿಗ್‌ 21 ಯುದ್ಧ ವಿಮಾನಗಳು ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಿದವು. ಗಡಿ ಭಾಗದಲ್ಲಿನ ಸೇನಾ ವಲಯಗಳನ್ನು ಗುರಿಯಾಗಿಸಿಕೊಂಡಿದ್ದ ಪಾಕಿಸ್ತಾನ ಯುದ್ಧ ವಿಮಾನಗಳು ಲೇಸರ್‌ ಸೂಚಿತ ಬಾಂಬ್‌ಗಳನ್ನು ಎಸೆದು ಪರಾರಿಯಾಗಲು ಪ್ರಯತ್ನಿಸಿದವು. ಭಾರತದ ವಿಮಾನಗಳು ಎರಗಲು ಬಂದಿದ್ದರಿಂದ ಅವುಗಳ ಗುರಿ ತಪ್ಪಿದವು. 
ಈ ಕಾರ್ಯಾಚರಣೆ ವೇಳೆಯಲ್ಲೇ ಪಾಕಿಸ್ತಾನಗದ ಒಂದು ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದ್ದು, ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪಾಕಿಸ್ತಾನಿ ಸೇನೆಯ ಜೆಟ್ ನಡೆಸಿದ ದಾಳಿಯಲ್ಲಿ ಭಾರತದ ಮಿಗ್ 21 ಬೈಸನ್ ಯುದ್ಧ ವಿಮಾನ ಪತನವಾಗಿದೆ. ಇದೇ ವಿಮಾನದಲ್ಲಿ ಐಎಎಫ್ ಅಭಿನಂದನ್ ಕೂಡ ಇದ್ದರು ಎನ್ನಲಾಗಿದೆ.
ವರದಿಯಲ್ಲಿರುವಂತೆ 'ಬುಧವಾರ ಬೆಳಿಗ್ಗೆ ಭಾರತದ ವಾಯು ವಲಯ ದಾಟಿ ಸೇನಾ ವಲಯಗಳ ಮೇಲೆ ದಾಳಿ ನಡೆಸಲು ಮುನ್ನುಗ್ಗಿದ್ದು ಪಾಕಿಸ್ತಾನದ 24 ಯುದ್ಧ ವಿಮಾನಗಳು. ಕೆಲವೇ ಕ್ಷಣಗಳಲ್ಲಿ ಭಾರತ ವಾಯುಪಡೆಯ ಯುದ್ಧವಿಮಾನಗಳು ದೃಢ ಹೋರಾಟದ ಮೂಲಕ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿ ಪಾರಮ್ಯ ಮೆರೆದವು. ಇದೇ ಕದನದಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಚಲಾಯಿಸುತ್ತಿದ್ದ ಮಿಗ್‌ 21, ಪಾಕಿಸ್ತಾನದ ಎಫ್‌–16 ಜೆಟ್‌ನ್ನು ಹೊಡೆದುರುಳಿಸಿದೆ. ಇದೇ ಕಾರ್ಯಾಚರಣೆಯಲ್ಲಿ ಪ್ಯಾರಾಚೂಟ್‌ ಬಳಸಿ ಜಿಗಿದ ಪೈಲಟ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ. 
ಭಾರತೀಯ ಜೆಟ್ ಗಳ ಫಾರ್ಮೇಷನ್ ನೋಡಿ ಗಾಬರಿಯಾಗಿದ್ದ ಪಾಕ್ ಜೆಟ್ ಪೈಲಟ್ ಗಳು
ಇನ್ನು ವರದಿಯಲ್ಲಿರುವಂತೆ ದಾಳಿ ಮಾಡಲು ಆಗಮಿಸಿದ್ದ ಪಾಕಿಸ್ತಾನದ 24 ಜೆಟ್ ಯುದ್ಧ ವಿಮಾನಗಳನ್ನು ಭಾರತದ ಕೇವಲ 8 ಜೆಟ್ ಯುದ್ಧ ವಿಮಾನಗಳು ತಡೆದು ನಿಲ್ಲಿಸಿದ್ದವು. ಇದೇ ತಂಡದಲ್ಲಿ ಪೈಲಟ್ ಅಭಿನಂದನ್ ಅವರ ಮಿಗ್ 21 ಬೈಸನ್ ಯುದ್ಧ ವಿಮಾನ ಕೂಡ ಇತ್ತು ಎನ್ನಲಾಗಿದೆ.
ಭಾರತೀಯ ಜೆಟ್ ಯುದ್ಧ ವಿಮಾನಗಳ ನೋಡಿಯೇ ದಂಗಾಗಿದ್ದ ಪಾಕ್ ನ ಎಫ್-16 ಜೆಟ್ ಗಳು ಭಾರತೀಯ ಪೈಲಟ್ ಗಳ ಫಾರ್ಮೇಷನ್ ನೋಡಿ ಗಾಬರಿಯಾಗಿದ್ದರು. ಪಾಕ್ ನ ಯಾವುದೇ ಜೆಟ್ ಗಳು ಭಾರತೀಯ ವಾಯುಗಡಿಯೊಳಗೆ ನುಸುಳದಂತೆ ಕೇವಲ ಈ  ಜೆಟ್ ಗಳ ಚಕ್ರವ್ಯೂಹ ನಿರ್ಮಾಣ ಮಾಡಿ ಪ್ರತಿದಾಳಿ ನಡೆಸಿದ್ದವು. ಇದೇ ಕಾರಣಕ್ಕೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪಾಕ್ ನ ಜೆಟ್ ಗಳು ಮತ್ತೆ ಪಾಕಿಸ್ತಾನದತ್ತ ಮುಖ ಮಾಡಿದವು. ಈ ವೇಳೆ ಪರಾರಿಯಾಗಲು ಭಾರತೀಯ ಜೆಟ್ ಗಳ ಕ್ಷಿಪಣಿಗಳನ್ನು ಹಾರಿಸಿದವು. ಈ ಪೈಕಿ ಒಂದು ಬಾಂಬ್ ಭಾರತದ ಕಾಶ್ಮೀರದೊಳಗೆ ಬಿದ್ದಿದೆ ಎಂದು ವರದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com