ಇಸಿಸ್ ಅಡಗುತಾಣಗಳ ಮೇಲೆ ಮುಂದುವರೆದ ದಾಳಿ: ಅಮ್ರೋಹದಲ್ಲಿ ಎನ್ಐಎ ಕಾರ್ಯಾಚರಣೆ
ದೇಶ
ಇಸಿಸ್ ಅಡಗುತಾಣಗಳ ಮೇಲೆ ಮುಂದುವರೆದ ದಾಳಿ: ಉತ್ತರಪ್ರದೇಶದ ಅಮ್ರೋಹದಲ್ಲಿ ಎನ್ಐಎ ಕಾರ್ಯಾಚರಣೆ
ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಅಡಗುತಾಣಗಳ ಮೇಲೆ...
ಅಮ್ರೋಹ: ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಅಡಗುತಾಣಗಳ ಮೇಲೆ ದಾಳಿಗಳು ಮಂದುವರೆದಿದ್ದು, ಮಂಗಳವಾರ ಕೂಡ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉತ್ತರಪ್ರದೇಶ ರಾಜ್ಯದ ಅಮ್ರೋಹದ 5 ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಪ್ರಭಾವಿ ರಾಜಕೀಯ ವ್ಯಕ್ತಿಗಳು ಹಾಗೂ ಇತರೆ ಭದ್ರತಾ ಕೇಂದ್ರಗಳು, ರಾಜಧಾನಿ ದೆಹಲಿ ಸೇರಿದಂತೆ ಹಲವೆಡೆ 10ಕ್ಕೂ ಹೆಚ್ಚು ಮಂದಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಅನ್ವಯ ಹಲವೆಡೆ ಡಿ.26 ರಂದು ದಾಳಿ ನಡೆಸಿದ್ದ ಅಧಿಕಾರಿಗಳು ಸಂಚು ವಿಫಲಗೊಳ್ಳುವಂತೆ ಮಾಡಿದ್ದರು.
ಇದರಂತೆ ಇಂದೂ ಕೂಡ ಅಮ್ರೋಹದ ಐದು ಪ್ರದೇಶಗಳ ಮೇಲೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ.

