ಮೋದಿ
ದೇಶ
2019 ಚುನಾವಣೆ: ಪ್ರಧಾನಿ ಕ್ಷೇತ್ ಬದಲಾವಣೆ? ಮೋದಿ ಆಯ್ಕೆ ಮಾಡಬಹುದಾದ ಆ ಕ್ಷೇತ್ರ ಯಾವುದು?
2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿರುವ ಲೋಕಸಭಾ ಕ್ಷೇತ್ರ ಬದಲಾವಣೆಯಾಗಲಿದೆಯೇ? ಹೀಗೊಂದು ಊಹಾಪೋಹ ಸೃಷ್ಟಿಯಾಗಿದೆ.
ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿರುವ ಲೋಕಸಭಾ ಕ್ಷೇತ್ರ ಬದಲಾವಣೆಯಾಗಲಿದೆಯೇ? ಹೀಗೊಂದು ಊಹಾಪೋಹ ಸೃಷ್ಟಿಯಾಗಿದೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಪ್ರದೀಪ್ ಪುರೋಹಿತ್ ಈ ಬಗ್ಗೆ ಸುಳಿವು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವುದರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದ ಪ್ರಧಾನಿ ಮೋದಿ, ಇವೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದಿದ್ದರು.
ಆದಾಗ್ಯೂ ಪ್ರದೀಪ್ ಪುರೋಹಿತ್ ಈ ಬಗ್ಗೆ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಜನತೆಯನ್ನು ಪ್ರೀತಿಸುತ್ತಾರೆ. ಆದ್ದರಿಂದ ಅವರು ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ಶೇ.90 ರಷ್ಟಿವೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ