ಯಾವುದೇ ಭಾರತೀಯ ಪ್ರಜೆ ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿಯುವುದಿಲ್ಲ: ಪ್ರಧಾನಿ

ಎನ್ ಆರ್ ಸಿ ಜಾರಿ ಅಸ್ಸಾಂ ನ ಜನತೆಯ ತ್ಯಾಗ ಹಾಗೂ ಪ್ರತಿಜ್ಞೆಯಿಂದಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಪ್ರಜೆಯನ್ನೂ ಸಹ ಎನ್ ಆರ್ ಸಿಯಿಂದ ಹೊರಗುಳಿಯುವುದಕ್ಕೆ ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.
ಯಾವುದೇ ಭಾರತ ಪ್ರಜೆ ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿಯುವುದಿಲ್ಲ: ಪ್ರಧಾನಿ
ಯಾವುದೇ ಭಾರತ ಪ್ರಜೆ ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿಯುವುದಿಲ್ಲ: ಪ್ರಧಾನಿ
ಅಸ್ಸಾಂ: ಎನ್ ಆರ್ ಸಿ  ಜಾರಿ ಅಸ್ಸಾಂ ನ ಜನತೆಯ ತ್ಯಾಗ ಹಾಗೂ ಪ್ರತಿಜ್ಞೆಯಿಂದಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಯಾವುದೇ ಪ್ರಜೆಯನ್ನೂ ಸಹ ಎನ್ ಆರ್ ಸಿಯಿಂದ ಹೊರಗುಳಿಯುವುದಕ್ಕೆ ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. 
ಅಸ್ಸಾಂ ನ ಸಿಲ್ಚಾರ್ ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಎನ್ ಆರ್ ಸಿ ಬಗ್ಗೆ ಮಾತನಾಡಿದ್ದು, ಎನ್ ಆರ್ ಜಿ ಜಾರಿಯ ವಿಷಯದಲ್ಲಿ ಹಲವು ಜನರು ಸಮಸ್ಯೆ ಎದುರಿಸಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಎನ್ಆರ್ ಸಿ ಪಟ್ಟಿಯಿಂದ ಯಾವುದೇ ಭಾರತೀಯ ಪ್ರಜೆಯ ಹೆಸರೂ ಹೊರಗುಳಿಯುವುದಕ್ಕೆ ಬಿಡುವುದಿಲ್ಲ ಎಂದೂ ಹೇಳಿದ್ದಾರೆ. 
ಇದೇ ವೇಳೆ ಸಂಸತ್ ನಲ್ಲಿ ನಾಗರಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಅವಿರತ ಶ್ರಮ ವಹಿಸುತ್ತಿದೆ. "ನಾಗರಿಕ ತಿದ್ದುಪಡಿ ಮಸೂದೆ ಯಾರದ್ದೇ  ಲಾಭಕ್ಕಾಗಿ ಜಾರಿಗೆ ತರಲಾಗುತ್ತಿಲ್ಲ.  ಅದರೆ ಈ ಹಿಂದಿನ ಅನ್ಯಾಯಗಳಿಗೆ ಪ್ರಾಯಶ್ಚಿತ್ತದ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ, ಶೀಘ್ರವೇ ಅದನ್ನು ಸಂಸತ್ ನಲ್ಲಿ ಅಂಗೀಕರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. 
ಕೇಂದ್ರ ಸರ್ಕಾರ ಅಸ್ಸಾಂನ ಸಂಸ್ಕೃತಿ, ಭಾಷೆ ಹಾಗೂ ಸಂಪನ್ಮೂಲ, ಅಸ್ಸಾಮಿಗಳ ಹಕ್ಕುಗಳನ್ನು ಸಂರಕ್ಷಿಸುವುದಕ್ಕೆ ಬದ್ಧವಾಗಿದೆ. 30-35 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಸ್ಸಾಂ ಅಕಾರ್ಡ್ ನ ಕ್ಲಾಸ್ 6 ನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೋದಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com