ಮಲೇಷ್ಯಾದ ಮೂವರು ಸೇರಿದಂತೆ ಒಟ್ಟು 10 ಮಹಿಳೆಯರಿಂದ ಶಬರಿಮಲೆ ಪ್ರವೇಶ: ಕೇರಳ ಪೊಲೀಸರ ಮಾಹಿತಿ

ಈ ವರೆಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಒಟ್ಟು 10 ಮಂದಿ ಮಹಿಳೆಯರು ಪ್ರವೇಶ ಮಾಡಿ ದರ್ಶನ ಪಡೆದಿದ್ದಾರೆ ಎಂದು ಕೇರಳ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದರ ವಿರುದ್ಧ ಕೇರಳದಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಈ ವರೆಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಒಟ್ಟು 10 ಮಂದಿ ಮಹಿಳೆಯರು ಪ್ರವೇಶ ಮಾಡಿ ದರ್ಶನ ಪಡೆದಿದ್ದಾರೆ ಎಂದು ಕೇರಳ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಮಲೇಷ್ಯಾದ ಮೂವರು ಮಹಿಳೆಯರೂ ಸೇರಿದಂತೆ ಈ ವರೆಗೂ ಶಬರಿಮಲೆಯಲ್ಲಿರುವ ಅಯ್ಯಪ್ಪ ಸನ್ನಿಧಾನಂಗೆ ಒಟ್ಟು 10 ಮಂದಿ ಮಹಿಳೆಯರು ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ್ದಾರೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.  ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಅನ್ವಯ ಜನವರಿ 1ರಿಂದ ಐದು ದಿನಗಳ ಅವಧಿಯಲ್ಲಿ ಮಲೇಷ್ಯಾ ಮೂಲದ ಮೂವರು ಮಹಿಳೆಯರೂ ಸೇರಿದಂತೆ 10 ಮಹಿಳೆಯರು ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. 
ಮಲೇಷ್ಯಾದ ಮೂವರು, ಕೇರಳದ ಇಬ್ಬರು ಹಾಗೂ ಶ್ರೀಲಂಕಾದ ಒಬ್ಬರು ಮಹಿಳೆಯರ ಜತೆಗೆ ಕನಿಷ್ಠ ಇನ್ನೂ ನಾಲ್ವರು ದೇಗುಲ ಪ್ರವೇಶಿಸಿದ್ದಾರೆ. 50 ವರ್ಷದೊಳಗಿನ ಒಟ್ಟು 10 ಮಂದಿ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯ್ಯಪ್ಪ ದೇಗುಲಕ್ಕೆ ಬಂದಿದ್ದ ಮಲೇಷ್ಯಾದ ಮುವರು ಮಹಿಳೆಯರ ಗುರುತು, ಹೆಸರು, ವಯಸ್ಸು, ಪೊಲೀಸರ ಬಳಿ ಇದೆ ಎಂದು ಪತ್ರಿಕೆ ತಿಳಿಸಿದೆ.
ಈ ಮಹಿಳೆಯರ ದೇಗುಲ ಪ್ರವೇಶಕ್ಕೆ ಸಂಬಂಧಿಸಿದ ವಿಡಿಯೋ ಕೇರಳ ಪೊಲೀಸರ ವಿಶೇಷ ಶಾಖೆ ಅಧಿಕಾರಿಗಳ ಬಳಿ ಇದ್ದು, ಅದು ತನಗೆ ಲಭ್ಯವಾಗಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಕನಕದುರ್ಗ, ಬಿಂದು ಶಬರಿಮಲೆ ಪ್ರವೇಶ ಮಾಡುವ ಮುನ್ನವೇ ಮಲೇಷ್ಯಾ ಮಹಿಳೆಯರಿಂದ ಅಯ್ಯಪ್ಪ ದರ್ಶನ
ಇನ್ನು ಜ.2ರಂದು ನಸುಕಿನ ಜಾವ ಕೇರಳದ ಬಿಂದು ಹಾಗೂ ಕನಕದುರ್ಗ ಎಂಬ ಮಹಿಳೆಯರು ದೇಗುಲ ಪ್ರವೇಶಿಸಿ ಸುದ್ದಿ ಮಾಡಿದ್ದರು. ಯಾವುದೇ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಬಹುದು ಎಂದು 2018ರ ಸೆ.28ರಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನ ಬಳಿಕ ದೇವಸ್ಥಾನಕ್ಕೆ ಕಾಲಿಟ್ಟಮೊದಲ ಮಹಿಳೆ ಅವರಾಗಿದ್ದರು. ಆದರೆ ಅವರಿಗಿಂತ ಒಂದು ದಿನ ಮೊದಲೇ, ಅಂದರೆ ಹೊಸ ವರ್ಷದ ಪ್ರಥಮ ದಿನವೇ ಮಲೇಷ್ಯಾದ ಮೂವರು ತಮಿಳು ಭಾಷಿಕ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com