ಮೈತ್ರಿ ಮುಕ್ತ ಬಿಜೆಪಿ!: ಕೇಸರಿ ಕೂಟದಿಂದ ಹೊರನಡೆಯಿತು ಎಜಿಪಿ!
ಮೈತ್ರಿ ಮುಕ್ತ ಬಿಜೆಪಿ!: ಕೇಸರಿ ಕೂಟದಿಂದ ಹೊರನಡೆಯಿತು ಎಜಿಪಿ!

ಮೈತ್ರಿ ಮುಕ್ತ ಬಿಜೆಪಿ!: ಕೇಸರಿ ಕೂಟದಿಂದ ಹೊರನಡೆಯಿತು ಎಜಿಪಿ!

2014 ರಿಂದ ಮೊದಲುಗೊಂಡು ಬಿಜೆಪಿಯ ವಿಜಯದ ನಾಗಾಲೋಟ ಕಾಂಗ್ರೆಸ್ ಮುಕ್ತ ಮಾಡುವ ಗುರಿ ತಲುಪುವ ವೇಳೆಗೆ ತಾನೇ ಮೈತ್ರಿ ಮುಕ್ತವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ನವದೆಹಲಿ: 2014 ರಿಂದ ಮೊದಲುಗೊಂಡು ಬಿಜೆಪಿಯ ವಿಜಯದ ನಾಗಾಲೋಟ ಕಾಂಗ್ರೆಸ್ ಮುಕ್ತ ಮಾಡುವ ಗುರಿ ತಲುಪುವ ವೇಳೆಗೆ ತಾನೇ ಮೈತ್ರಿ ಮುಕ್ತವಾಗುವ ಲಕ್ಷಣಗಳು ಗೋಚರಿಸುತ್ತಿವೆ. 
ಬಿಜೆಪಿ ಮೈತ್ರಿಕೂಟದಿಂದ ಒಂದೊಂದೇ ಪಕ್ಷಗಳು ಹೊರ ನಡೆಯುತ್ತಿದ್ದು, ಈಗ ಅಸ್ಸಾಂ ನಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿ ಮೈತ್ರಿಯಿಂದ ಅಸೋಮ್ ಗಣ ಪರಿಷತ್ ಹೊರನಡೆದಿದೆ. 
ಅಸ್ಸಾಂ ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ(ಸಿಟಿಜನ್ಶಿಪ್ ತಿದ್ದುಪಡಿ ಮಸೂದೆ) ಯನ್ನು ವಿರೋಧಿಸಿ ಎಜಿಪಿ ಬಿಜೆಪಿ ಮೈತ್ರಿ ಕಡಿದುಕೊಂಡಿದೆ. ಈ ಬಗ್ಗೆ ಎಜಿಪಿ ಅಧ್ಯಕ್ಷ ಹಾಗೂ ಸಚಿವರೂ ಆಗಿರುವ ಅತುಲ್ ಬೋರಾ ಸ್ಪಷ್ಟಪಡಿಸಿದ್ದಾರೆ. 
ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ಥಾನದ ಮುಸ್ಲಿಮೇತರ ಜನರಿಗೆ ಭಾರತದ ಪೌರತ್ವ ನೀಡಲಾಗುವ ಅಂಶವನ್ನು ಪ್ರಸ್ತಾಪಿಸಲಾಗಿದೆ. ಇದನ್ನು ಎಜಿಪಿ ವಿರೋಧಿಸಿದೆ. ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ತಾನು ವಿರೋಧಿಸುತ್ತಿರುವ ಅಂಶಗಳನ್ನು ಎಜಿಪಿ ನಿಯೋಗ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ತಿಳಿಸಿತ್ತು. 
"ಮಸೂದೆಯನ್ನು ಈ ಸ್ವರೂಪದಲ್ಲಿ ಜಾರಿಗೊಳಿಸುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಕೊನೆಯ ಹಂತದ ಪ್ರಯತ್ನವನ್ನು ಮಾಡಲಾಯಿತು. ಆದರೆ ಸರ್ಕಾರ ಮಸೂದೆಯನ್ನುಜಾರಿಗೊಳಿಸುವುದಾಗಿ ತಿಳಿಸಿದೆ ಈ ಹಿನ್ನೆಲೆಯಲ್ಲಿ ಅಸ್ಸಾಂ ನಲ್ಲಿ ಬಿಜೆಪಿ ಮೈತ್ರಿ ತೊರೆಯುತ್ತಿದ್ದೇವೆ ಎಂದು ಎಜಿಪಿ ನಾಯಕ ಅತುಲ್ ಬೋರಾ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com