ತಮಿಳುನಾಡು: ಜನವರಿ 28ರಂದು ನಡೆಯಬೇಕಿದ್ದ ತಿರವರೂರು ಉಪಚುನಾವಣೆ ರದ್ದು

ಮಾಜಿ ಸಿಎಂ ಕರುಣಾನಿಧಿ ಅವರ ನಿಧನದಿಂದ ತೆರವಾಗಿದ್ದ ತಿರುವಾರೂರ್ ವಿಧಾನಸಭೆ ಕ್ಷೇತ್ರದಲ್ಲಿ ಜನವರಿ 28ರಂದು ನಡೆಸಲು ಉದ್ದೇಶಿಸಿದ್ದ ಉಪ ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ತಮಿಳುನಾಡು: ಮಾಜಿ ಸಿಎಂ ಕರುಣಾನಿಧಿ ಅವರ ನಿಧನದಿಂದ ತೆರವಾಗಿದ್ದ ತಿರುವಾರೂರ್ ವಿಧಾನಸಭೆ ಕ್ಷೇತ್ರದಲ್ಲಿ ಜನವರಿ 28ರಂದು ನಡೆಸಲು ಉದ್ದೇಶಿಸಿದ್ದ ಉಪ ಚುನಾವಣೆಯನ್ನು ಚುನಾವಣೆ ಆಯೋಗ ರದ್ದುಪಡಿಸಿದೆ. 
ತಿರುವಾರೂರ್ ಕ್ಷೇತ್ರದಲ್ಲಿ ಇತ್ತೀಚಿನ ಗಜ ಚಂಡಮಾರುತದ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ಪೂರ್ಣಗೊಂಡಿಲ್ಲ. ಹೀಗಾಗಿ ಚುನಾವಣೆ ನಡೆಸಲು ಸ್ಥಳೀಯ ಆಡಳಿತ ಇನ್ನೂ ಸಿದ್ಧವಾಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಚುನಾವಣಾ ಆಯೋಗ ತಿಳಿಸಿದೆ.
ಜೊತೆಗೆ ಸೂಕ್ತ ಸಮಯದಲ್ಲಿ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ. 
ಚಂಡಮಾರುತ ಪರಿಹಾರ ವಿತರಣೆ ಕಾರ್ಯವಷ್ಟೇ ಅಲ್ಲ, ಪೊಂಗಲ್ ಹಬ್ಬ, ಶಾಲಾ ಪರೀಕ್ಷೆಗಳು, ಸಾಂಬಾ ಬೆಳೆಗಳ ಕೊಯ್ಲಿನ ಅವಧಿ ಇದಾಗಿರುವುದರಿಂದ ಈಗ ಉಪ ಚುನಾವಣೆಗೆ ಸೂಕ್ತ ಕಾಲವಲ್ಲ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಮುಖ್ಯ ಚುನಾವಣೆ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. 
ರಾಜ್ಯ ಸರ್ಕಾರ ಕೂಡ ಈ ವರ್ಷದ ಏಪ್ರಿಲ್‌ಗೆ ಮೊದಲು ಯಾವುದೇ ಉಪ ಚುನಾವಣೆ ನಡೆಸುವುದು ಬೇಡ ಎಂದು ಆಯೋಗಕ್ಕೆ ಪತ್ರ ಬರೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com